ನರಸಿಂಗ್ಗೆ ಕ್ಲೀನ್ಚಿಟ್: ರಿಯೋಗೆ ಅವಕಾಶ
ಹೊಸದಿಲ್ಲಿ, ಆ.1: ಡೋಪಿಂಗ್ ಹಗರಣ ದಲ್ಲಿ ಸಿಲುಕಿಕೊಂಡಿದ್ದ ಕುಸ್ತಿಪಟು ನರಸಿಂಗ್ ಯಾದವ್ ಇಂದು ರಾಷ್ಟ್ರೀಯ ಉದ್ದೀಪನಾ ದ್ರವ್ಯ ನಿಗ್ರಹ ಘಟಕ(ನಾಡಾ)ದಿಂದ ಕ್ಲೀನ್ ಚಿಟ್ ಪಡೆದಿದ್ದಾರೆ.
ಯಾದವ್ ಪ್ರಕರಣದ ವಿಚಾರಣೆ ನಡೆಸಿದ ನಾಡಾವು ಇಂದು ತೀರ್ಪು ನೀಡಿದ್ದು, ಇದರೊಂದಿಗೆ ಮುಂಬರುವ ರಿಯೋ ಒಲಿಂಪಿಕ್ಸ್ನಲ್ಲಿ 74 ಕೆ.ಜಿ.ಫ್ರಿ ಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲು ನರಸಿಂಗ್ ಯಾದವ್ ಅವರಿಗೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗಿದೆ. ಇತ್ತೀಚೆಗೆ ನಡೆಸಲಾದ ಎ ಮತ್ತು ಬಿ ಮಾದರಿ ಪರೀಕ್ಷೆಗಳಲ್ಲಿ ನರಸಿಂಗ್ ಯಾದವ್ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿತ್ತು. ನರಸಿಂಗ್ ಯಾದವ್ ನಿಷೇಧಿತ ದ್ರವ್ಯ ಅನಾಬೊಲಿಕ್ ಸ್ಟಿರಾಯ್ಡಿ ಮೆಥಾಂಡಿನೋನ್ ಸೇವಿಸಿ ರುವುದು ಡೋಪಿಂಗ್ ಟೆಸ್ಟ್ನಲ್ಲಿ ಪತ್ತೆಯಾಗಿತ್ತು.
ನರಸಿಂಗ್ ಯಾದವ್ ಅವರು ತಾನು ನಿಷೇಧಿತ ದ್ರವ್ಯ ಸೇವಿಸಿಲ್ಲ. ತನ್ನನ್ನು ಮುಗಿಸಲು ಈ ಹಗರಣದಲ್ಲಿ ಸಿಲುಕಿಸಲಾಗಿದೆ. ತನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ಹೇಳಿದ್ದರು. ಕಳೆದ ಬುಧವಾರ ನರಸಿಂಗ ಯಾದವ್ ವಕೀಲರೊಂದಿಗೆ ನಾಡಾ ಸಮಿತಿಯ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಕೆಲವರನ್ನು ವಿಚಾರಣೆ ನಡೆಸಿದ್ದ ನಾಡಾ ತೀರ್ಪನ್ನು ಕಾಯ್ದಿರಿಸಿತ್ತು. ಈ ನಡುವೆ ನರಸಿಂಗ್ ಬದಲಿಗೆ ಒಲಿಂಪಿಕ್ಸ್ಗೆ ಪ್ರವೀಣ್ ರಾಣಾ ಅವರನ್ನು ರಿಯೋ ಒಲಿಂಪಿಕ್ಸ್ಗೆ ಕಳುಹಿಸುವ ಸಿದ್ದತೆ ನಡೆಸಲಾಗಿತ್ತು.
ನಾಡಾದ ಮಹಾ ನಿರ್ದೆಶಕ ನವೀನ್ ಅಗರ್ವಾಲ್ ಸೋಮವಾರ ತೀರ್ಪು ಪ್ರಕಟಿಸಿ ನರಸಿಂಗ್ ಯಾದವ್ಗೆ ಒಲಿಂಪಿಕ್ಸ್ಗೆ ತೆರಳಲು ಹಾದಿ ಸುಗಮಗೊಳಿಸಿದರು.
ಕಳೆದ ಜೂನ್ 2ರ ತನಕ ನಡೆಸಲಾದ ಮಾದರಿಗಳ ಪರೀಕ್ಷೆಯಲ್ಲಿ ನರಸಿಂಗ್ ಯಾದವ್ ಅನುತ್ತೀರ್ಣಗೊಂಡಿಲ್ಲ. ನರಸಿಂಗ್ ಯಾದವ್ ತಪ್ಪು ಎಸಗಿಲ್ಲ. ಅವರು ಷಡ್ಯಂತ್ರದ ಬಲಿಪಶುವಾಗಿದ್ದಾರೆಂದು ಪರಿಗಣಿಸಿ ಉದ್ದೀಪನಾ ದ್ರವ್ಯ ನಿಗ್ರಹ ಸಂಹಿತೆ 10.4ರಂತೆ ನಾಡಾವು ನರಸಿಂಗ್ ಯಾದವ್ರನ್ನು ದೋಷಮುಕ್ತಗೊಳಿಸಿದೆ.
ನರಸಿಂಗ್ ಯಾದವ್ ತೀರ್ಪು ಬಂದ ಬಳಿಕ ತುಂಬಾ ಖುಶಿಯಲ್ಲಿದ್ದಾರೆ. ತನಗೆೆ ನ್ಯಾಯ ದೊರಕಿಸಿಕೊಟ್ಟಿರುವ ಪ್ರಧಾನ ಮಂತ್ರಿಗೆ ಅಭಾರಿಯಾಗಿರುವೆನು ಎಂದು ಹೇಳಿದ್ದಾರೆ. ಮುಂಬರುವ ರಿಯೋ ಒಲಿಂಪಿಕ್ಸ್ನ ತಯಾರಿ ಯಲ್ಲಿರುವೆ. ಪದಕ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಒಲಿಂಪಿಕ್ಸ್ನ 74 ಕೆ.ಜಿ. ವಿಭಾಗದ ಸ್ಪರ್ಧೆಗೆ ನೊಂದಾ ಯಿಸಲು ತಕ್ಷಣ ನರಸಿಂಗ್ ಯಾದವ್ ಹೆಸರನ್ನು ಅಂತಾ ರಾಷ್ಟ್ರೀಯ ಕುಸ್ತಿ ಫೆಡರೇಶನ್ಗೆ ಕಳುಹಿಸಕೊಡುವುದಾಗಿ ಭಾರ ತದ ಕುಸ್ತಿ ಫೆಡರೇಶನ್ನ ಅಧ್ಯಕ್ಷ ಬ್ರಿಜ್ ಭೂಷಣ್ ತಿಳಿಸಿದ್ದಾರೆ.