ಜಮ್ಮು -ಕಾಶ್ಮೀರದ ಶಿಕ್ಷಣ ಸಚಿವರ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಎಸೆತ

ಶ್ರೀನಗರ, ಆ.2: ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಸಚಿವ ಹಾಗೂ ಪಿಡಿಪಿ ನಾಯಕ ನಯೀಮ್ ಅಕ್ತರ್ ನಿವಾಸದ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಅಖ್ತರ್ ಮನೆಯ ಮೇಲೆ ಎರಡು ಬಾಂಬ್ ಗಳನ್ನು ದುಷ್ಕರ್ಮಿಗಳು ಎಸೆದು ಪರಾರಿಯಾಗಿದ್ದಾರೆ. ಆದರೆ ಯಾವುದೇ ಹಾನಿಯಾಗಿಲ್ಲ. ಈ ಸಂದರ್ಭದಲ್ಲಿ ಸಚಿವರು ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಪಾರ್ರೆ ಪೊರಾದ ಸಚಿವರ ಮನೆಯ ಮೇಲೆ ಎರಡು ಪೆಟ್ರೋಲ್ ಬಾಂಬ್ ಗಳನ್ನು ಎಸೆಯಲಾಗಿದ್ದು, ಒಂದು ಬಾಂಬ್ ಮನೆಯ ಕಂಪೌಂಡ್ ನ ಒಳಗಡೆ ಮತ್ತು ಇನ್ನೊಂದು ಬಾಂಬ್ ಕಂಪೌಂಡ್ ನ ಹೊರಗಡೆ ಬಿದ್ದಿದೆ. ಈ ಘಟನೆ ಬಳಿಕ ಸಚಿವರು ಮನೆಯನ್ನು ತೆರವುಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story