ಆಂಧ್ರಪ್ರದೇಶ ಸಂಪೂರ್ಣ ಬಂದ್
![ಆಂಧ್ರಪ್ರದೇಶ ಸಂಪೂರ್ಣ ಬಂದ್ ಆಂಧ್ರಪ್ರದೇಶ ಸಂಪೂರ್ಣ ಬಂದ್](https://www.varthabharati.in/sites/default/files/images/articles/2016/08/2/andra.jpg)
ವಿಜಯವಾಡ, ಆ.2: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಕ್ಕಾಗಿ ಆಗ್ರಹಿಸಿ ಪ್ರತಿಪಕ್ಷಗಳು ನೀಡಿರುವ ಆಂಧ್ರ ಪ್ರದೇಶ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದು, ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದೆ. ಯಾವುದೇ ಬಸ್ಗಳು ರಸ್ತೆಗಿಳಿದಿಲ್ಲ. ಬಂದ್ನ ಹಿನ್ನೆಲೆಯಲ್ಲಿ ಕರ್ನಾಟದಿಂದ ಯಾವುದೇ ಬಸ್ ಗಳು ಆಂಧ್ರಕ್ಕೆ ಓಡಾಡುತ್ತಿಲ್ಲ.
ವೈಎಸ್ ಆರ್ ಪಕ್ಷ ನೀಡಿರುವ ಆಂಧ್ರಪ್ರದೇಶ ಬಂದ್ ಗೆ ಎಡಪಕ್ಷಗಳು ಬೆಂಬಲ ವ್ಯಕ್ತಪಡಿಸಿದೆ.
Next Story