ರಬ್ಬರ್ತೋಟದೊಳಗೆ ಗೋಣಿಯಲ್ಲಿ ಗರ್ಭಿಣಿಯ ಶವ ಪತ್ತೆ
ಎಟ್ಟುಮಾನ್ನೂರ್,ಆ. 2: ಅದಿರಂಬುಝ ಐಕ್ಕರಕುನ್ನೇಲ್ ಜಂಕ್ಷನ್ ಬಳಿಯ ರಬ್ಬರ್ ತೋಟದಲ್ಲಿ ಗೋಣಿಯೊಳಗೆ ಇಟ್ಟು ಬಾಯಿಕಟ್ಟಿದ ಸ್ಥಿತಿಯಲ್ಲಿ ಗರ್ಭಿಣಿಯ ಮೃತದೇಹ ಪತ್ತೆಯಾಗಿದ್ದು ಇದಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.
ಫೈನೆಲ್ ಬಾಬುರ ರಬ್ಬರ್ ತೋಟದಲ್ಲಿ 40ವರ್ಷ ವಯಸ್ಸಿರಬಹುದೆಂದು ಅಂದಾಜಿಸಲಾದ ಮಹಿಳೆಯ ಮೃತದೇಹ ಇದಾಗಿದ್ದು ಮಹಿಳೆಯನ್ನು ಯಾರೆಂದು ಗುರುತು ಹಿಡಿಯಲಾಗಿಲ್ಲ.ಮಹಿಳೆಯ ಕೊಲೆಗೈಯ್ಯಲಾಗಿದೆ ಎಂಬ ಸಂದೇಹದಲ್ಲಿ ಈಕೆಯೊಂದಿಗೆ ಸಂಬಂಧಹೊಂದಿದ್ದವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ ಎನ್ನಲಾಗಿದೆ. ರಬ್ಬರ್ ತೆಗೆಯುವ ಕೆಲಸಗಾರ ಬಂದು ನೋಡಿದಾಗ ಗೋಣಿಯ ಕಟ್ಟು ಆತನಿಗೆ ಕಂಡು ಬಂದಿತ್ತು. ನಂತರ ಅದನ್ನು ಬಿಚ್ಚಿನೋಡಿದಾಗ ಅದು ಗರ್ಭಿಣಿಯ ಮೃತದೇಹವಾಗಿತ್ತು. ಸ್ಥಳದಲ್ಲಿ ಸೋಡಾ ಬಾಟ್ಲಿ ಮದ್ಯಪಾನ ನಡೆಸಿದ ಕುರುಹುಗಳು ಪೊಲೀಸರಿಗೆ ಲಭ್ಯವಾಗಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸಧಿಕಾರಿಗಳು,ಸ್ಥಳೀಯ ಶಾಸಕರು ಭೇಟಿ ನೀಡಿದ್ದು. ಪರಿಸರಕ್ಕೆ ಜನರು ಪ್ರವೇಶಿಸದಂತೆ ಮಾಡಿ ಪೊಲೀಸರು ಸಾಕ್ಷ್ಯಸಂಗ್ರಹಿಸಿದ್ದಾರೆಂದು ವರದಿ ವಿವರಿಸಿದೆ.