ಔರಾಂಗಾಬಾದ್‌ನಲ್ಲಿ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪ್ರಕರಣ; ಅಬು ಜುಂದಾಲ್ ಸೇರಿದಂತೆ ಏಳು ಮಂದಿಗೆ ಜೀವಾವಧಿ ಸಜೆ

ಮುಂಬೈ, ಆ.2:ಔರಾಂಗಾಬಾದ್‌ನಲ್ಲಿ 2006ರಲ್ಲಿ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪ್ರಕರಣಕ್ಕೆಸಂಬಂಧಿಸಿ 'ಲಷ್ಕರ್ ಇ ತೋಯ್ಬಾ' ಸಂಘಟನೆಯ ಕಾರ್ಯಕರ್ತ ಸೈಯದ್ ಝೈಬುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್ ಸೇರಿದಂತೆ 7 ಮಂದಿ ಆರೋಪಿಗಳಿಗೆ ಇಂದು ಮುಂಬೈನ ವಿಶೇಷ ಮೋಕಾ(ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿದೆ.
ಈ ಪ್ರಕರಣದಲ್ಲಿ ಇಬ್ಬರಿಗೆ ಹದಿನಾಲ್ಕು ವರ್ಷ ಮತ್ತು ಮೂವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಒಟ್ಟು 22 ಆರೋಪಿಗಳಲ್ಲಿ 8 ಮಂದಿ ದೋಷಮುಕ್ತಿಗೊಂಡಿದ್ದಾರೆ. ಓರ್ವ ತಲೆಮರೆಸಿಕೊಂಡಿದ್ದಾನೆ. ಇನ್ನೊಬ್ಬ ಪ್ರತ್ಯೇಕ ವಿಚಾರಣೆ ಎದುರಿಸುತ್ತಿದ್ದಾನೆ.
ಆರೋಪಿಗಳ ವಿರುದ್ಧ ದಾಖಲಿಸಿಕೊಳ್ಳಲಾಗಿದ್ದ ಮೋಕಾ ಕಾಯ್ದೆಯನ್ನು ರದ್ದುಗೊಳಿಸಲಾಗಿದ್ದು, ಆರೋಪಿಗಳು ಕಾನೂನುಬಾಹಿರ ಚುಟುವಟಿಕೆಗಳ ತಡೆ ಕಾಯ್ದೆ, ಶಶ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಸಜೆ ವಿಧಿಸಲಾಗಿದೆ
2006 ರಲ್ಲಿ ಔರಂಗಾಬಾದ್ ಬಳಿ ತಡೆದ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳವು ಕಾರಿನಿಂದ 30 ಕೆ ಜಿ ಆರ್ ಡಿ ಎಕ್ಸ್, 10 ಎ ಕೆ-47 ಗನ್ ಜತೆಗೆ 3,200 ಗುಂಡುಗಳನ್ನು ವಶಪಡಿಸಿಕೊಂಡಿತ್ತು.ಇನ್ನೊಂದು ಕಾರಿನಲ್ಲಿದ್ದ ಮುಖ್ಯ ಆರೋಪಿ ಅಬು ಜುಂದಾಲ್ ಎಟಿಎಸ್ ಕೈಗೆ ಪರಾರಿಯಾಗಿದ್ದನು.
2013 ರಲ್ಲಿ ಅಬು ಜುಂದಾಲ್ ನ್ನು ಬಂಧಿಸಲಾಗಿತ್ತು. 26/11 ರ ಮುಂಬೈ ತಾಜ್ ಹೋಟೆಲ್ ದಾಳಿಯಲ್ಲೂ ಅಬು ಜುಂದಾಲ್ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.







