ಹಿಲರಿ ಅಧ್ಯಕ್ಷೀಯ ಅಭ್ಯರ್ಥಿಯಾಗಲು ಜಯಲಲಿತಾ ಕಾರಣ !

ಚೆನ್ನೈ, ಆ. 2: ಹಿಲರಿ ಕ್ಲಿಂಟನ್ ಅಮೆರಿಕದ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಲು ತಮಿಳುನಾಡು ಮುಖ್ಯಮಂತ್ರಿ, ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಕಾರಣ !
ಕೂನೂರು ಕ್ಷೇತ್ರದ ಎಐಎಡಿಎಂಕೆ ಶಾಸಕ ರಾಮು ಅವರ ಪ್ರಕಾರ 'ಅಮ್ಮ ರೊಂದಿಗೆ ಹಿಲರಿಯ ಭೇಟಿಯಿಂದಾಗಿ' ಈಗ ಅವರಿಗೆ ಅಮೆರಿಕದ ಪ್ರಪ್ರಥಮ ಮಹಿಳಾ ಅಧ್ಯಕ್ಷೀಯ ಅಭ್ಯರ್ಥಿಯಾಗುವ ಭಾಗ್ಯ ಬಂದಿದೆ.
2011 ರಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಭಾರತಕ್ಕೆ ಭೇಟಿ ನೀಡಿದ್ದ ಹಿಲರಿ ಚೆನ್ನೈಗೆ ಬಂದು ಜಯಲಲಿತಾರನ್ನು ಭೇಟಿಯಾಗಿ ಒಂದು ಗಂಟೆ ಕಾಲ ಸವಿವರವಾಗಿ ಮಾತುಕತೆ ನಡೆಸಿದ್ದರು. "ಭೇಟಿಯ ಬಳಿಕ ಜಯಲಲಿತಾ ಅವರ ಸುಲಲಿತ ಇಂಗ್ಲಿಷ್ ಹಾಗೂ ಆಡಳಿತ ವೈಖರಿಯನ್ನು ಹಿಲರಿ ಕೊಂಡಾಡಿದ್ದರು. ಇದೀಗ ಇಡೀ ಪ್ರಪಂಚ ಆ ಭೇಟಿಯ ಪ್ರಭಾವವನ್ನು ನೋಡುತ್ತಿದೆ" ಎಂದು ರಾಮು ಹೇಳಿದ್ದಾರೆ.
Courtesy : thenewsminute.com
Next Story





