ಕೆ.ಪಿ.ಟಿ.: ಮಹಿಳಾ ಹಾಸ್ಟೆಲ್‌ಗೆ ಐವನ್ ಭೇಟಿ

ಮಂಗಳೂರು, ಆ.2: ಕೆಪಿಟಿಯಲ್ಲಿರುವ ಮಹಿಳಾ ಹಾಸ್ಟೆಲ್‌ಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಭೇಟಿ ನೀಡಿ ಹೊಸದಾಗಿ ನಿರ್ಮಿಸಿರುವ ಹಾಸ್ಟೆಲ್ ಕಾಮಗಾರಿಯನ್ನು ಪರಿಶೀಲಿಸಿದರು.
ಹಾಸ್ಟೆಲ್‌ನ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರಲ್ಲದೆ, ಮಹಿಳೆಯರಿಗೆ ರಕ್ಷಣೆ ಕೊಡಲು ಹಾಸ್ಟೆಲ್ ಹಿಂಭಾಗದಲ್ಲಿ ಅವರಣಗೋಡೆ ನಿರ್ಮಿಸಲು ಅನುದಾನ ನೀಡುವುದಾಗಿ ತಿಳಿಸಿದರು. ಹೆಚ್ಚಿನ ಅನುದಾನಕ್ಕಾಗಿ ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು. ಅಡುಗೆ ಕೋಣೆಯಲ್ಲಿ ಅಗತ್ಯದ ದುರಸ್ತಿ ಕಾರ್ಯಗಳನ್ನು ಕೂಡಲೇ ಮಾಡುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಭಾರ ಪ್ರಾಂಶುಪಾಲ ಎಚ್.ಎಮ್. ಮಹೇಂದ್ರ, ಸುಶೀಲ ಕುಮಾರಿ, ವಾರ್ಡನ್ ಪ್ರಶಾಂತ ಬಿ.ಪಿ., ರಿಜಿಸ್ಟ್ರಾರ್ ರಾಜೇಂದ್ರ ಪ್ರಸಾದ್, ಅನ್ಸಾರ್, ಆಲ್ಟ್ಸೈನ್, ವಸಂತ ಶೆಟ್ಟಿ ಪಡೀಲ್, ರೋನಾಲ್ಡ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.
Next Story





