ರಸ್ತೆ ಜೋಡಣೆ: ಐವನ್‌ರಿಂದ ಸ್ಥಳ ಪರಿಶೀಲನೆ

ಮಂಗಳೂರು, ಆ.2: ಮಹಾನಗರ ಪಾಲಿಕೆ ವ್ಯಾಪ್ತಿಯ ಡೊಂಗರಕೇರಿ ಅಳಕೆ ಪ್ರದೇಶ ನಿವಾಸಿಗಳ ದೂರಿನ ಮೇರೆಗೆ ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರು ಅಳಕೆ ಪಂಪ್ ಸ್ಟೇಷನ್ ಮಾರ್ಗದಲ್ಲಿ ಆನಂದ್‌ರಾವ್ ವಠಾರಕ್ಕೆ ರಸ್ತೆ ಜೋಡಣೆ ಮಾಡುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ಸ್ಥಳೀಯ ರಸ್ತೆಯನ್ನು ಜೋಡಣೆ ಮಾಡಲು ಹಾಗೂ ಮಳೆ ನೀರು ಹೋಗಬೇಕಾದರೆ ಚರಂಡಿ ಕಾಮಗಾರಿ ಅಗತ್ಯವಿದ್ದು ರಸ್ತೆ ಅಗಲೀಕರಣ ಮಾಡಬೇಕೆಂದು ಜನರ ಬೇಡಿಕೆ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಐವನ್ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ರಾಜೇಂದ್ರ, ಮಾಜಿ ಸದಸ್ಯ ದೇವಾನಂದ ಪೈ, ಸಿಲ್ವೆಸ್ಟರ್ ಡಿಸೋಜ, ನಾರಾಯಣ ಪೂಜಾರಿ, ಭಗವನ್ ಸಿಂಗ್, ರಾಮ ಸುವರ್ಣ, ಜೈ ಕಿಸಾನ್, ಸತೀಶ್ ಪೆಂಗಲ್, ಮೋಹನ್ ಕುಮಾರ್, ಹರೀಶ್, ಸಂತೋಷ್ ಕುಮಾರ್, ಭರತ್ ಲಾಲ್, ಅನ್ಸಾರ್, ಗೋಪಾಲ್ ರಾವ್, ದೀಪಕ್, ಸುವರ್ಣ ಮಾಧವ್ ಸುವರ್ಣ, ಕೃಷ್ಣಾ ಮುಂತಾದವರು ಉಪಸ್ಥಿತರಿದ್ದರು.
Next Story





