ಜೇಬಿನಲ್ಲಿ ಸ್ಫೋಟಿಸಿದ iPhone 6 !
ವ್ಯಕ್ತಿಗೆ ಗಂಭೀರ ಸುಟ್ಟ ಗಾಯ
ಹೊಸದಿಲ್ಲಿ, ಆ.2 : ಆಸ್ಟ್ರೇಲಿಯಾದ ಪ್ರಜೆಯೊಬ್ಬ ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದ ಐಫೋನ್ ಸ್ಪೋಟಿಸಿ ವ್ಯಕ್ತಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ವರದಿಯಾಗಿದೆ.
ಗಾರೇತ್ ಕ್ಲಿಯರ್ ಎಂಬ ಮ್ಯಾನೇಜ್ ಮೆಂಟ್ ಸಲಹೆಗಾರ ಬೈಕ್ ನಲ್ಲಿ ಹೋಗುತ್ತಿದ್ದಾಗ ತನ್ನ ಶಾರ್ಟ್ಸ್ ನ ಹಿಂಬದಿ ಜೇಬಿನಲ್ಲಿಟ್ಟ ಐಫೋನ್ ೬ ಇದ್ದಕ್ಕಿದ್ದಂತೆ ಸ್ಪೋಟಿಸಿದೆ. ಇದರಿಂದ ಆತನ ಶಾರ್ಟ್ಸ್ ಸಂಪೂರ್ಣ ಸುಟ್ಟು ಹೋಗಿ ತೊಡೆಯ ಎರಡು ಪದರ ಚರ್ಮ ಸುಟ್ಟು ಹೋಗಿದೆ !
ಬಳಿಕ ಸಿಡ್ನಿಯ ರಾಯಲ್ ನಾರ್ತ್ ಶೋರ್ ಆಸ್ಪತ್ರೆಯಲ್ಲಿ ಅವರಿಗೆ ಚರ್ಮದ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಐಫೋನ್ ನ ಹಿಂಬದಿ ಸಂಪೂರ್ಣ ಸುಟ್ಟು ಅದರ ಲೀಥಿಯಂ ಸೋರಿಕೆಯಾಗಿದೆ. ಫೋನ್ ನ ಮೇಲ್ಭಾಗಕ್ಕೆ ಮಾತ್ರ ಏನೂ ಹಾನಿಯಾಗಿಲ್ಲ.
ಈ ಬಗ್ಗೆ ತನಿಖೆ ನಡೆಸುವುದಾಗಿ ಆಪಲ್ , ಕ್ಲಿಯರ್ ಗೆ ಹೇಳಿದೆ ಎಂದು ಹೇಳಲಾಗಿದೆ.
ಕ್ಲಿಯರ್ ಈ ಬಗ್ಗೆ ಹೀಗೆ ಟ್ವೀಟ್ ಮಾಡಿದ್ದಾರೆ :
@tim_cook @AppleNewsAU @AppleNewsUK iPhone exploded in back pocket after bike fall. Skin graft surgery required pic.twitter.com/QG26cuLYXH
— Gareth Clear (@gareth_clear) July 31, 2016