ಸಾರಕ್ಕಿ ಕೆರೆ ಸುತ್ತಮುತ್ತಲಿನ ಜನತೆಯ ನಿಲ್ಲದ ಪರದಾಟ
ನಗರದಲ್ಲಿ ಮುಂದುವರಿದ ಮಳೆ ನೀರು ಅವಾಂತರ

ಬೆಂಗಳೂರು, ಆ.2: ಕಳೆದ ಶುಕ್ರವಾರ ರಾತ್ರಿ ಸುರಿದ ಮಳೆ ನೀರಿನ ಅವಾಂತರದಿಂದ ಸಾರಕ್ಕಿ ಬಳಿಯ ಅಶ್ವತ್ಥ ನಾರಾಯಣ ಬಡಾವಣೆ, ಚಿಕ್ಕಸ್ವಾಮಿ ಸೇರಿದಂತೆ ಹಲವು ಬಡಾವಣೆಗಳ ಜನತೆ ಪರದಾಟ ಇಂದಿಗೂ ನಿಂತಿಲ್ಲ. ಸಾರಕ್ಕಿ ಕೆರೆ ತುಂಬಿ ಕೋಡಿ ಒಡೆದ ಪರಿಣಾಮ ಕೆರೆಯ ನೀರು ಸುತ್ತಮುತ್ತಲ ಪ್ರದೇಶದ ಚರಂಡಿ, ರಸ್ತೆಗಳಲ್ಲಿ ಈಗಲೂ ಹರಿಯುತ್ತಿದೆ. ಈ ನೀರನ್ನು ಹೊರ ಹಾಕಲು ಬಿಬಿಎಂಪಿ ಸಿಬ್ಭಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು, ನೀರನ್ನು ಹೊರ ಹಾಕಿದಷ್ಟು ಮತ್ತಷ್ಟು ನೀರು ಬಂದು ಸೇರುತ್ತಲೇ ಇದೆ.
ತಬ್ಬಿಬ್ಬಾದ ಅಧಿಕಾರಿಗಳು: ಸಾರಕ್ಕಿ ಕೆರೆಯ ಸುತ್ತಮುತ್ತಲ ಬಡಾವಣೆಗಳಿಗೆ ಮೇಯರ್ ಮಂಜುನಾಥ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಮಳೆ ಆಗುತ್ತದೆ ಎಂಬ ಮುನ್ಸೂಚನೆ ಸಿಕ್ಕಿದ್ದರೂ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ನಿಮ್ಮಿಂದಾಗಿ ನಾವು ಜನತೆಯಿಂದ ನಿಂದನೆ ಕೇಳಬೇಕು. ಜನತೆಗೆ ಯಾವುದೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸಾರಕ್ಕಿ ಕೆರೆ ಒತ್ತುವರಿ ಆಗಿರುವುದರಿಂದ ಕೆರೆಯ ನೀರು ಬಡಾವಣೆಗಳಿಗೆ ನುಗ್ಗಿದೆ. ಮುಂದಿನ ದಿನಗಳಲ್ಲಿ ಹೀಗಾಗ ದಂತೆ ಎಚ್ಚರಿಕೆ ವಹಿಸಲಾಗುವುದು. ಸಾಂಕ್ರಮಿಕ ರೋಗಗಳು ಹರಡದಂತೆ ಔಷಧಿಗಳನ್ನು ಸಿಂಪಡಿಸಲಾಗು ತ್ತಿದ್ದು, ಎಲ್ಲ ರೀತಿಯ ನೆರವು ನೀಡಲು ಬಿಬಿಎಂಪಿ ಸಿದ್ಧವಿದೆ ಎಂದು ತಿಳಿಸಿದರು.
ಮಳೆ ನೀರಿನಿಂದ ತೀವ್ರ ಸಂಕಷ್ಟ ಎದುರಿಸ ಬೇಕಾ ಯಿತು. ನಾವು ಬೆಳಗ್ಗೆ ಕೆಲಸಕ್ಕೆ ಹೋದರೆ ರಾತ್ರಿ ಬರುತ್ತೇವೆ. ಜನರ ಸಮಸ್ಯೆ ಕೇಳಲು, ಸಮಾಜದ ಕೆಲಸ ಮಾಡುವುದಕ್ಕಾಗಿಯೆ ಅಲ್ಲವೆ ಪಾಲಿಕೆ ಸದಸ್ಯರು, ಬಿಬಿಎಂಪಿ ಅಧಿಕಾರಿಗಳು ನೇಮಕವಾಗಿರುವುದು. ಮಳೆಯ ಮುನ್ಸೂಚನೆ ಸಿಕ್ಕಾಗಲೇ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿತ್ತು. ಅವರ ಕರ್ತವ್ಯ ನಿರ್ಲಕ್ಷಕ್ಕೆ ನಾವು ತೊಂದರೆ ಅನುಭವಿಸುವಂತಾಗಿದೆ.
-ಮಂಜುನಾಥ್,ಅಶ್ವತ್ಥ ನಾರಾಯಣ ಬಡಾವಣೆ ನಿವಾಸಿ







