ರೋಪ್ ವೇ ಮದುವೆ..!!
ಮಹಾರಾಷ್ಟ್ರದ ಜೈದೀಪ್ ಜಾದವ್ ಮತ್ತು ರೇಷ್ಮಾ ಪಾಟೀಲ್ ಎಂಬ ಜೋಡಿ ವಿಭಿನ್ನವಾಗಿ ಮದುವೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಜೋಡಿ ರವಿವಾರ ಸುಮಾರು 600 ಅಡಿ ಎತ್ತರದ ಕಣಿವೆ ಪ್ರದೇಶದಲ್ಲಿ ರೋಪ್‌ವೇ ಮೂಲಕ ನೇತಾಡುತ್ತಲೇ ಹಾರ ಬದಲಾಯಿಸಿ, ಮರಾಠಿ ಸಂಪ್ರದಾಯದಂತೆ ವಿವಾಹವಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಪುರೋಹಿತರೂ ರೋಪ್ ವೇನಲ್ಲಿ ವಧು, ವರರ ಜೊತೆಗಿದ್ದುದು ವಿಶೇಷ!
Next Story





