Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಡ ಕಾರ್ಮಿಕರ ಮೇಲೆ...

ಬಡ ಕಾರ್ಮಿಕರ ಮೇಲೆ ದೌರ್ಜನ್ಯವೆಸಗುವವರು...

-ವೀರಪ್ಪ ಡಿ. ಎನ್., ಮಡಿಕೇರಿ-ವೀರಪ್ಪ ಡಿ. ಎನ್., ಮಡಿಕೇರಿ2 Aug 2016 11:41 PM IST
share

ಮಾನ್ಯರೇ,

ಕರ್ನಾಟಕದಲ್ಲಿ ಕಾರ್ಮಿಕರ ಕೊರತೆ ವಿಪರೀತ ಆಗಿರುವುದರಿಂದ ಅಸ್ಸಾಂ ರಾಜ್ಯದ ಬಡ ಕಾರ್ಮಿಕರು ಕರ್ನಾಟಕದ ಕೃಷಿಕರ ಪಾಲಿಗೆ ವರದಾನವಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಹಿಂದೂ ಬುಡಕಟ್ಟು ಜನಾಂಗದವರು. ಅವರ ದುಡಿಮೆಯಿಂದಾಗಿಯೇ ಮಲೆನಾಡು ಮತ್ತು ಕರಾವಳಿಯಲ್ಲಿ ಹೆಚ್ಚಿನ ಕಾಫಿ ತೋಟ ಹಾಗೂ ಅಡಿಕೆ ತೋಟಗಳು ಸರಿಯಾಗಿ ನಡೆಯುತ್ತಿವೆ. ಆದರೂ ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಅಲ್ದೂರಿನಲ್ಲಿ ಕಾಫಿ ತೋಟದ ಕೂಲಿಗಾಗಿ ಬಂದ ಅಸ್ಸಾಂನ ಕೂಲಿಯಾಳುಗಳಿಗೂ ಅವರು ಬಾಂಗ್ಲಾ ಮುಸ್ಲಿಮರೆಂದು ಆರೋಪಿಸಿ ಬಜರಂಗಿಗಳು ಅಮಾನುಷವಾಗಿ ಬಡಿದಿದ್ದಾರೆ. ಬಜರಂಗಿಗಳು ಇಂತಹ ಶ್ರಮಿಕ ವರ್ಗದವರನ್ನು ಅಮಾನುಷವಾಗಿ ಬಡಿಯುವುದು ಅವರ ಗುಪ್ತ ಅಜೆಂಡಾದ ಭಾಗವಾಗಿರುವಂತಿದೆ.

ಹಾಗಾದರೆ ಈ ಹೊರ ರಾಜ್ಯದ ಕೂಲಿಗಳ ಜಾಗದಲ್ಲಿ ಸ್ಥಳೀಯ ಬಜರಂಗಿಗಳು ಬಂದು ಕಾಫಿ ತೋಟದಲ್ಲಿ ಕೂಲಿ ಮಾಡುತ್ತಾರೆಯೇ? ಮಾನವತೆಯಿಲ್ಲದ ಇಂತಹ ಕೇಸರಿ ಪಡೆಗಳಿಗೆ ಧಿಕ್ಕಾರ. ಇಂತಹವರಿಗೆ ಧೈರ್ಯ ಇದ್ದರೆ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲಿನ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲೂ ತುಂಬಿ ಕೊಂಡಿರುವ ಹಿಂದಿವಾಲರನ್ನು ಮುಟ್ಟಿ ನೋಡಲಿ, ಇಡೀ ದೇಶದಲ್ಲಿ ಕನ್ನಡಿಗರ ವಿರುದ್ಧ ಆಕ್ರೋಶ ವ್ಯಕ್ತವಾಗುವುದು ಖಂಡಿತ. ಈಗ ಹೆಚ್ಚಿನ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ (ಕರ್ನಾಟಕ ಮೂಲದ ಬ್ಯಾಂಕುಗಳೂ ಸೇರಿ) ಬಿಹಾರ, ಉತ್ತರ ಪ್ರದೇಶ ಕಡೆಯ ಹಿಂದಿವಾಲಾಗಳೇ ತೂರಿಕೊಂಡಿದ್ದಾರೆ. ಕೆಳಹಂತದ ಗುಮಾಸ್ತ ಹುದ್ದೆಗಳನ್ನೂ ಅವರೇ ಕಬಳಿಸಿದ್ದಾರೆ. ಕೇವಲ ಚಪರಾಸಿ ಹುದ್ದೆಗಳು ಮಾತ್ರ ಕನ್ನಡಿಗರಿಗೆ ಸಿಗುತ್ತಿವೆ. ಕನ್ನಡಿಗರಿಗೆ ಈಗ ಕರ್ನಾಟಕದಲ್ಲಿಯೇ ಬ್ಯಾಂಕ್ ಗುಮಾಸ್ತ ನೌಕರಿಯೂ ಸಿಗುತ್ತಿಲ್ಲ. ಕನ್ನಡಿಗ ಪದವೀಧರರಿಗೂ ಯಾವುದೋ ಅಂಗಡಿಯಲ್ಲಿ ಜುಜುಬಿ ಐದು ಸಾವಿರ ರೂಪಾಯಿ ಸಂಬಳದ ಸೇಲ್ಸ್‌ಮ್ಯಾನ್ ಅಥವಾ ಡೆಲಿವೆರಿ ಬಾಯ್ ಕೆಲಸವೇ ಗತಿ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗ್ರಾಹಕರು ಕನ್ನಡದಲ್ಲಿ ಮಾತನಾಡಿದರೆ ಈ ಹಿಂದಿವಾಲಾಗಳು ಕನ್ನಡಿಗರಿಗೆ ರಾಷ್ಟ್ರಭಾಷೆ ಹಿಂದಿಯಲ್ಲಿ ಮಾತನಾಡಬೇಕೆಂದು ರೋಪು ಹಾಕುತ್ತಾರೆ. ಹಾಗಿದ್ದರೂ ನಮ್ಮ ಬಜರಂಗಿಗಳಿಗೆ ಈ ಹಿಂದಿ ಬ್ಯಾಂಕ್ ಕರ್ಮಚಾರಿಗಳ ವಿರುದ್ಧ ಪ್ರತಿಭಟಿಸಲು ಧೈರ್ಯವಿಲ್ಲ. ತಮ್ಮದೇ ಮಾತೃಭಾಷೆ ಕನ್ನಡ ಅವರಿಗೆ ಗೌಣವಾಗಿದೆ. ಕೈಲಾಗದ ಬಡಕೂಲಿಯಾಳುಗಳ ವಿರುದ್ಧ ತಮ್ಮ ಪೌರುಷ ತೋರಿಸುತ್ತಿದ್ದಾರೆ.

share
-ವೀರಪ್ಪ ಡಿ. ಎನ್., ಮಡಿಕೇರಿ
-ವೀರಪ್ಪ ಡಿ. ಎನ್., ಮಡಿಕೇರಿ
Next Story
X