ಭಾರತ-ವೆಸ್ಟ್‌ಇಂಡೀಸ್ ಎರಡನೆ ಟೆಸ್ಟ್‌ನ 3ನೆ ದಿನದ ಹೈಲೈಟ್ಸ್
ಹೊಸದಿಲ್ಲಿ, ಆ.2:
* ಭಾರತ ತಂಡ ಕೆರಿಬಿಯನ್ ನಾಡಿನಲ್ಲಿ ಇದೇ ಮೊದಲ ಬಾರಿ ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎರಡನೆ ಬ್ಯಾಟಿಂಗ್‌ನ ವೇಳೆ 304 ರನ್ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದೆ. ವಿಂಡೀಸ್ ವಿರುದ್ಧ 2ನೆ ಬಾರಿಯ ಬ್ಯಾಟಿಂಗ್‌ನ ವೇಳೆ ಒಟ್ಟಾರೆ 3ನೆ ಬಾರಿ 200ಕ್ಕೂ ಅಧಿಕ ರನ್ ಮುನ್ನಡೆ ಪಡೆದಿದೆ.
*ಭಾರತ ಸತತ ಎರಡನೆ ಬಾರಿ 300ಕ್ಕೂ ಅಧಿಕ ಮುನ್ನಡೆ ಪಡೆದಿದೆ. ಕಳೆದ ವಾರ ಆ್ಯಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ 323 ರನ್ ಮುನ್ನಡೆ ಪಡೆದಿತ್ತು.
*ಭಾರತ(500/9 ಡಿಕ್ಲೇರ್) ಕಿಂಗ್ಸ್‌ಸ್ಟನ್‌ನಲ್ಲಿ ಮೊದಲ ಬಾರಿ 500 ರನ್ ಗಳಿಸಿದೆ. *ಅಜಿಂಕ್ಯ ರಹಾನೆ(ಔಟಾಗದೆ 108) ಐದನೆ ಕ್ರಮಾಂಕದಲ್ಲಿ ಗರಿಷ್ಠ ಸ್ಕೋರ್ ಬಾರಿಸಿದ ಭಾರತದ 2ನೆ ಬ್ಯಾಟ್ಸ್‌ಮನ್. 1953ರ ಮಾರ್ಚ್‌ನಲ್ಲಿ ಪಾಲಿ ಉಮ್ರಿಗರ್ 117 ರನ್ ಗಳಿಸಿದ್ದರು.
*ರಹಾನೆ ವಿದೇಶಿ ನೆಲದಲ್ಲಿ 5ನೆ ಕ್ರಮಾಂಕದಲ್ಲಿ ಮೂರು ಶತಕಗಳನ್ನು ಬಾರಿಸಿರುವ ಭಾರತದ ಐದನೆ ಬ್ಯಾಟ್ಸ್‌ಮನ್. ಪಾಲಿ ಉಮ್ರಿಗರ್, ಮುಹಮ್ಮದ್ ಅಝರುದ್ದೀನ್, ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗುಲಿ ಈ ಸಾಧನೆ ಮಾಡಿದ್ದರು.
* ವೃದ್ದಿಮಾನ್ ಸಹಾ(47) ವಿಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಗರಿಷ್ಠ ಸ್ಕೋರ್ ಬಾರಿಸಿದರು. ಸರಣಿಯ ಮೊದಲ ಟೆಸ್ಟ್‌ನಲ್ಲಿ 40 ರನ್ ಗಳಿಸಿದ್ದರು.
*ರಾಸ್ಟನ್ ಚೇಸ್(5-121) ಟೆಸ್ಟ್‌ನಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲು ಪಡೆದರು. 1976ರ ನಂತರ 5 ವಿಕೆಟ್ ಪಡೆದ ವಿಂಡೀಸ್‌ನ ಮೊದಲ ಬೌಲರ್ ಚೇಸ್. 1976ರ ಮಾರ್ಚ್‌ನಲ್ಲಿ ಭಾರತದ ವಿರುದ್ಧ ಬ್ರಿಡ್ಜ್‌ಟೌನ್‌ನಲ್ಲಿ ಡೇವಿಡ್ ಹಾಲ್ಫೋರ್ಡ್(5-23) ಈ ಸಾಧನೆ ಮಾಡಿದ್ದರು.
*ಕೆರಿಬಿಯನ್‌ನಾಡಿನಲ್ಲಿ ನಡೆದ ಟೆಸ್ಟ್‌ನಲ್ಲಿ ಮೂರನೆ ಬಾರಿ ಉಭಯ ತಂಡಗಳ ಸ್ಪಿನ್ನರ್‌ಗಳು ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್ ಪಡೆದಿದ್ದಾರೆ.







