ಅಮೆರಿಕದಲ್ಲಿ ಭಾರತ-ವಿಂಡೀಸ್ ಟ್ವೆಂಟಿ-20 ಪಂದ್ಯ
ಮುಂಬೈ, ಆ.2: ಭಾರತ ತಂಡ ಅಮೆರಿಕದಲ್ಲಿ ಆ.27 ಹಾಗೂ 28 ರಂದು ನಡೆಯಲಿರುವ 2 ಪಂದ್ಯಗಳ ಟ್ವೆಂಟಿ-20 ಅಂತಾರಾಷ್ಟ್ರೀಯ ಸರಣಿಯಲ್ಲಿ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ತಂಡವನ್ನು ಎದುರಿಸಲಿದೆ ಎಂದು ಬಿಸಿಸಿಐ ಮಂಗಳವಾರ ಘೋಷಿಸಿದೆ.
ಪಂದ್ಯಗಳು ಫ್ಲೋರಿಡಾದ ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್‌ನಲ್ಲಿ ನಡೆಯಲಿದೆ. ಹೊಸ ಮಾರುಕಟ್ಟೆ ಹಾಗೂ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಕ್ರಿಕೆಟ್ ಪಂದ್ಯಗಳನ್ನು ಅಮೆರಿಕದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಮೆರಿಕದ ಕ್ರಿಕೆಟ್ ಅಭಿಮಾನಿಗಳಿಗೆ ವಿಶ್ವದ ಎರಡು ಚಾಂಪಿಯನ್ ತಂಡಗಳ ಪಂದ್ಯವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
Next Story





