ಬಿಸಿಸಿಐ ಕಾನೂನು ಸಮಿತಿ ಮುಖ್ಯಸ್ಥರಾಗಿ ಕಾಟ್ಜು ಆಯ್ಕೆ

ಹೊಸದಿಲ್ಲಿ, ಆ.2: ಜಸ್ಟಿಸ್ ಲೋಧಾ ಸಮಿತಿ ಶಿಫಾರಸು ಮಾಡಿರುವ ಸುಧಾರಣೆಗಳನ್ನು ಜಾರಿಗೆ ತರಲು, ಸೂಕ್ತ ಕಾನೂನು ಸಲಹೆ-ಸೂಚನೆ ಪಡೆಯಲು ನಾಲ್ವರು ಸದಸ್ಯರ ಕಾನೂನು ಸಮಿತಿಯನ್ನು ಬಿಸಿಸಿಐ ರಚಿಸಿದೆ. ಈ ಸಮಿತಿಗೆ ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜುರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.
ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜಸ್ಟಿಸ್ ಲೋಧಾ ಸಮಿತಿಯೊಂದಿಗೆ ಸಂವಹನ ನಡೆಸಲು ಹಾಗೂ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಸಲಹೆ ಹಾಗೂ ಮಾರ್ಗದರ್ಶನ ಪಡೆಯುವ ಉದ್ದೇಶದಿಂದ ಕಾಟ್ಜುರನ್ನು ಬಿಸಿಸಿಐ ನೇಮಕ ಮಾಡಿದೆ.
ಕಾಟ್ಜು 2006 ರಿಂದ 2011ರ ತನಕ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರಾಗಿದ್ದರು. ಪಿಸಿಐನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
Next Story





