ನರಸಿಂಗ್‌ಗೆ ಕ್ಲೀನ್‌ಚಿಟ್ ಪರಿಶೀಲಿಸಲಾಗುತ್ತದೆ: ವಾಡಾ

ಹೊಸದಿಲ್ಲಿ, ಆ.2: ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ(ನಾಡಾ)ದಿಂದ ಸೋಮವಾರ ದೋಷಮುಕ್ತಗೊಂಡ ಕುಸ್ತಿಪಟು ನರಸಿಂಗ್ ಯಾದವ್ ಪ್ರಕರಣವನ್ನು ಮರು ಪರಿಶೀಲಿಸಲಾಗುತ್ತದೆ ಎಂದು ವಿಶ್ವ ಉದ್ದೀಪನಾ ಮದ್ದು ನಿಗ್ರಹ ಘಟಕ(ವಾಡಾ)ಹೇಳಿದೆ.
ನರಸಿಂಗ್ ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ನಾಡಾದಿಂದ ಕ್ಲೀನ್ ಚಿಟ್ ಪಡೆದ ಮರುದಿನವೇ ಜಾಗತಿಕ ಉದ್ದೀಪನಾ ತಡೆ ಘಟಕ ವಾಡಾ ಪ್ರಕರಣವನ್ನು ಪರಿಶೀಲಿಸುವುದಾಗಿ ಹೇಳಿರುವುದು ಯಾದವ್‌ಗೆ ಆತಂಕ ಮೂಡಿಸಿದೆ.
ಯಾದವ್ ಪ್ರಕರಣಕ್ಕೆ ಸಂಬಂಧಿಸಿ ನಾಡಾದಿಂದ ವಿವರಣೆ ಕೇಳಿದ್ದೇವೆ. ನಾವು ಈ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯಿಸಲಾರೆವು ಎಂದು ವಾಡಾ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Next Story





