ಕೊಲ್ಲೂರು-ಗೋಳಿಹೊಳೆ 94ಸಿ ಅರ್ಜಿದಾರರ ಸಮಾವೇಶ

ಕುಂದಾಪುರ, ಆ.2: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ 94 ಸಿ ಅರ್ಜಿದಾರರ ಸಮಾವೇಶವು ಕೊಲ್ಲೂರು ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗಿತು.
ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷ ಎಚ್.ನರಸಿಂಹ ಸಮಾವೇಶವನ್ನು ಉದ್ಘಾಟಿಸಿದರು. ಸಿಐಟಿಯು ಬೈಂದೂರು ವಲಯ ಅಧ್ಯಕ್ಷ ಗಣೇಶ ತೊಂಡೆಮಕ್ಕಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡಿದರು. ಸಂಘದ ಮುಖಂಡರಾದ ನಾಗರತ್ನಾ ನಾಡ, ಶೀಲಾವತಿ ಪಡುಕೋಣೆ, ಮುತ್ತ ದೇವಾಡಿಗ ಉಪಸ್ಥಿತರಿದ್ದರು.
ಕೊಲ್ಲೂರು ಗ್ರಾಮದ 94ಸಿ ಅರ್ಜಿದಾರರ ಹೋರಾಟ ಸಮಿತಿಗೆ ಸಂಜೀವ, ನಾರಾಯಣ ಕೆ.ಕೆ. ರಮೇಶ್ ಹೆಗ್ಡೆ, ಉಮೇಶ್, ನಾಗವೇಣಿ, ಸುಜಾತಾ, ಮೇರಿ ಕುರಿಯಾಕೋಸ್‌ರನ್ನು ಸಂಚಾಲಕರಾಗಿ ಸರ್ವಾ ನುಮತದಿಂದ ಆಯ್ಕೆ ಮಾಡಲಾಯಿತು.
ಗೋಳಿಹೊಳೆ: ಗೋಳಿಹೊಳೆ ಮಹಿಷಮರ್ದಿನಿ ಸಭಾಭವನದಲ್ಲಿ ಜರಗಿದ ಗೋಳಿಹೊಳೆ, ಯಳಜಿತ್ ಗ್ರಾಮಗಳ 94ಸಿ ಅರ್ಜಿದಾರರ ಸಮಾವೇಶವನ್ನು ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ಉದ್ಘಾಟಿಸಿದರು.
ಸಂಘದ ಮುಖಂಡರಾದ ಮುತ್ತ ಮಾರ್ಕೊಡು, ಗ್ರಾಪಂ ಮಾಜಿ ಅಧ್ಯಕ್ಷ ಮಹಾಬಲ ಕೊಠಾರಿ ಉಪಸ್ಥಿತರಿದ್ದರು. ಗೋಳಿಹೊಳೆ ಯಳಜಿತ್ ಗ್ರಾಮಗಳ 94ಸಿ ಅರ್ಜಿದಾರರ ಹೋರಾಟ ಸಮಿತಿಗೆ ಪ್ರಭಾಕರ ಪೂಜಾರಿ, ಸಣ್ಣಯ್ಯ ಮರಾಠಿ, ಸುರೇಶ ಅರೆಶಿರೂರು, ಸುರೇಶ್ ಪೂಜಾರಿ, ಮಾಚ ಪೂಜಾರಿ, ಮಹಾಬಲ ಕೊಠಾರಿ, ಪರಮೇಶ್ವರ ಪೂಜಾರಿ, ನರಸಿಂಹ ಆಚಾರ, ಜ್ಯೋತಿ ಕೊಠಾರಿ, ನಾಗರತ್ನಾ, ಮಂಜುನಾಥ ಪೂಜಾರಿ, ರತ್ನಾಕರ ಪೂಜಾರಿ, ಶೇಷು ಗೌಡ, ಸೀತ ಗೌಡರನ್ನು ಸಂಚಾಲಕರಾಗಿ ಆಯ್ಕೆ ಮಾಡಲಾಯಿತು.
ನಾಳೆ ಹಕ್ಕುಪತ್ರಕ್ಕಾಗಿ ಧರಣಿ: ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿರುವ 94ಸಿ ಅರ್ಜಿದಾರರಿಗೆ ಕೂಡಲೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಆ.4ರಂದು ಪೂರ್ವಾಹ್ನ 11 ಗಂಟೆಗೆ ಬೈಂದೂರು ವಿಶೇಷ ತಹಶೀಲ್ದಾರ್ ಕಚೇರಿ ಎದುರು ಧರಣಿಯನ್ನು ಆಯೋಜಿಸಲಾಗಿದೆ ಎಂದು ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ ತಿಳಿಸಿದ್ದಾರೆ.







