ದಿಲ್ಲಿಯಲ್ಲಿ ಡೇವಿಸ್‌ಕಪ್
ಹೊಸದಿಲ್ಲಿ, ಆ.2: ಭಾರತ ತಂಡ ಐದು ಬಾರಿಯ ಚಾಂಪಿಯನ್ ಸ್ಪೇನ್ ವಿರುದ್ಧದ ಡೇವಿಸ್‌ಕಪ್ ಗ್ರೂಪ್ ಪ್ಲೇ-ಆಫ್ ಪಂದ್ಯದ ಆತಿಥ್ಯವಹಿಸಿಕೊಳ್ಳಲಿದೆ. ಈ ಪಂದ್ಯವು ಸೆಪ್ಟಂಬರ್ 16 ರಿಂದ 18ರ ತನಕ ಡೆಲ್ಲಿ ಲಾನ್ ಟೆನಿಸ್ ಅಸೋಸಿಯೇಶನ್‌ನ ಹಾರ್ಡ್‌ಕೋರ್ಟ್‌ನಲ್ಲಿ ನಡೆಯಲಿದೆ.
ಸೆಪ್ಟಂಬರ್ ಮಾನ್ಸೂನ್ ಋತುವಾಗಿರುವ ಕಾರಣ, ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪಂದ್ಯಗಳಿಗೆ ಹುಲ್ಲುಹಾಸಿನ ಅಂಗಳ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಭಾರತ್ ಓಜಾ ಹೇಳಿದ್ದಾರೆ.
Next Story





