ಸೆಪ್ಟಂಬರ್‌ಗೆ ಮುಂಗಾರು ಮಳೆ-2

ಸ್ಯಾಂಡಲ್ ವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಮುಂಗಾರುಮಳೆ ಬಿಡುಗಡೆಯಾಗಿ ಹತ್ತು ವರ್ಷಗಳೇ ಕಳೆದಿವೆ. ಆದರೆ ಇಂದಿಗೂ ಯೋಗರಾಜ್‌ಭಟ್ ನಿರ್ದೇಶನ ದ ಆ ಸಿನೆಮಾದ ನೆನಪು ಕನ್ನಡ ಸಿನೆಮಾ ಪ್ರೇಮಿಗಳಲ್ಲಿ ಇನ್ನೂ ಹಸಿರಾಗಿದೆ. ಇದೀಗ ಈ ಚಿತ್ರದ ಮುಂದುವರಿದ ಭಾಗ ತೆರೆಕಾಣಲು ಸಜ್ಜಾಗಿದೆ. ಹೌದು. ಮುಂಗಾರು ಮಳೆ-2 ಸೆಪ್ಟ್ಟಂಬರ್ 9ರಂದು ಬಿಡುಗಡೆಗೊಳ್ಳುವುದು ಇದೀಗ ಕನ್‌ಫರ್ಮ್ ಆಗಿದೆ. ಚಿತ್ರದ ನಾಯಕ ನಟ ಗೋಲ್ಡನ್‌ಸ್ಟಾರ್ ಗಣೇಶ್ ಈ ಚಿತ್ರದ ಬಗ್ಗೆ ತುಂಬಾ ಭರವಸೆ ಇಟ್ಟುಕೊಂಡಿದ್ದಾರೆ.ಮೊದಲ ಮುಂಗಾರುಮಳೆಯ ಯಶಸ್ಸನ್ನೇ ಎರಡನೆ ಭಾಗದಲ್ಲೂ ಪುನಾರವರ್ತಿಸುವ ಆತ್ಮವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಚಿತ್ರದ ಮೂಲಕ ಮಾಡೆಲ್ ಹಾಗೂ ಕರಾವಳಿಯ ಬೆಡಗಿ ನೇಹಾ ಶೆಟ್ಟಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ‘ಯುಟರ್ನ್’ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಈ ಚಿತ್ರದಲ್ಲಿ ಪೋಷಕಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್‌ಕೂಡ ಈ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆಂದು ಚಿತ್ರತಂಡದಿಂದ ಪ್ರಶಂಸೆಯ ಮಾತು ಗಳು ಕೇಳಿಬರುತ್ತಿವೆ. ‘ಮೊಗ್ಗಿನಮನಸ್ಸು’, ‘ಕೃಷ್ಣನ್ ಲವ್ ಸ್ಟೋರಿ’ ಖ್ಯಾತಿಯ ಶಶಾಂಕ್, ಈ ಚಿತ್ರದಲ್ಲಿ ನಿರ್ದೇಶನದ ಜೊತೆ ಕಥೆ, ಚಿತ್ರಕತೆಯನ್ನು ಕೂಡಾ ಬರೆದಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೆಲವು ಇಂಪಾದ ಟ್ಯೂನ್‌ಗಳನ್ನು ನೀಡಿದ್ದಾರೆಂದು ಚಿತ್ರತಂಡದ ಅಂಬೋಣ. ಒಟ್ಟಿನಲ್ಲಿ ಈ ಸಲದ ಮುಂಗಾರು ಕಳೆಯುತ್ತಿ ದ್ದಂತೆಯೇ ಮುಂಗಾರು ಮಳೆ-2 ಸುರಿಯು ವುದಂತೂ ಗ್ಯಾರಂಟಿ.





