ಕಾರ್ಕಳ: ಬಸ್-ಟೆಂಪೋ ಮುಖಾಮುಖಿ ಢಿಕ್ಕಿ; 15 ಮಂದಿಗೆ ಗಾಯ

ಕಾರ್ಕಳ, ಆ.3: ಬಸ್ ಮತ್ತು 407 ಟೆಂಪೋ ನಡುವೆ ನಡೆದ ಮುಖಾಮುಖಿ ಅಪಘಾತದಲ್ಲಿ ಒಟ್ಟು 15 ಜನ ಗಾಯಗೊಂಡ ಘಟನೆ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಬಳಿ ಬುಧವಾರ ಸಂಭವಿಸಿದೆ.
ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ತೆರಳುತ್ತಿರುವ ಖಾಸಗಿ ಬಸ್ ಮತ್ತು ಅಜೆಕಾರಿನಿಂದ ಹಿರ್ಗಾನ ಕಡೆ ತೆರಳುತ್ತಿದ್ದ 407 ಟೆಂಪೋ ನಡುವೆ ಈ ಅಪಘಾತ ಸಂಂಭವಿಸಿದೆ.
ಬಸ್ ಚಾಲಕ ಎನ್.ಆರ್.ಸ್ವಾಮಿ (45) ಮತ್ತು ಪ್ರಯಾಣಿಕರಾದ ಪ್ರಜ್ಞಾ(21), ಧನಂಜ್(23), ಅಪೂರ್ವ(18), ಪ್ರಿಯಾ(18), ಮೋಹಿನಿ(62), ಜಯಂತಿ(53) ಸಾವಿತ್ರಿ(47), ಅಂತೋನಿ(36), ವಸಂತಿ(52), ಕನಕ(19), ಸ್ವಾತಿ(19), ಅಕ್ಷ್(24) ಗಾಯಗೊಂಡಿದ್ದರೆ, 407 ಟೆಂಪೊ ಚಾಲಕ ಪ್ರವೀಣ್ ನಾಯಕ್(38) ಹಾಗೂ ಸುನಿಲ್(28) ಗಾಯಗೊಂಡವರು.
ಬಸ್ಸಿನಲ್ಲಿದ್ದು ಗಾಯಗೊಂಡವರ ಪೈಕಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಗಾಯಾಳುಗಳನ್ನು ಮಣಿಪಾಲ ಆಸ್ನತ್ರೆ, ಕಾರ್ಕಳ ನರ್ಸಿಂಗ್ ಹೋಂ ಮತ್ತು ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರಾದ ಚೇತನ ಶೆಟ್ಟಿ ಕೊರಳ ಮತ್ತು ಹಿರ್ಗಾನ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಶೆಟ್ಟಿ ಅವರು ತಮ್ಮ ಸ್ವಂತ ಕಾರಿನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದರು. ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದ ಹಿನ್ನೆಲೆಯಲ್ಲಿ ಗಾಯಾಳುಗಳಿಗೆ ಸೂಕ್ತ ರೀತಿಯ ಪ್ರಥಮ ಚಿಕಿತ್ಸೆ ನೀಡುವಲ್ಲಿಯೂ ತೊಂದರೆಯಾಗಿತ್ತು.







