3ನೆ ಟೆಸ್ಟ್: ಇಂಗ್ಲೆಂಡ್ 297 ರನ್‌ಗೆ ಆಲೌಟ್

ಬರ್ಮಿಂಗ್‌ಹ್ಯಾಮ್, ಆ.3: ವೇಗದ ಬೌಲರ್ ಸೊಹೈಲ್ ಖಾನ್ ನೇತೃತ್ವದ ಪಾಕ್ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ಇಂಗ್ಲೆಂಡ್ ಬುಧವಾರ ಇಲ್ಲಿ ಆರಂಭವಾದ 3ನೆ ಟೆಸ್ಟ್‌ನ ಮೊದಲ ದಿನವೇ 297 ರನ್‌ಗೆ ಆಲೌಟಾಗಿದೆ.
ಇಂಗ್ಲೆಂಡ್‌ನ ಪರ ಬ್ಯಾಲನ್ಸ್(70) ಹಾಗೂ ಮೊಯಿನ್ ಅಲಿ(63) ಅರ್ಧಶತಕ ಬಾರಿಸಿದರು. ಈ ಇಬ್ಬರು 6ನೆ ವಿಕೆಟ್‌ಗೆ 66 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ನಾಯಕ ಕುಕ್ 45 ರನ್ ಗಳಿಸಿದ್ದರು.
ಪಾಕ್ ಪರ ಸೊಹೈಲ್(5-96) ಐದು ವಿಕೆಟ್ ಗೊಂಚಲು ಪಡೆದರು. ಮುಹ್ಮಮದ್ ಆಮಿರ್(2-53), ರಾಹತ್ ಅಲಿ(2-83) ತಲಾ 2 ವಿಕೆಟ್ ಉರುಳಿಸಿದರು.
.........
Next Story





