Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಆನಂದಿ ಬೆನ್ ಪಟೇಲ್ ಎಂಬ ಹರಕೆಯ ಕುರಿ

ಆನಂದಿ ಬೆನ್ ಪಟೇಲ್ ಎಂಬ ಹರಕೆಯ ಕುರಿ

ವಾರ್ತಾಭಾರತಿವಾರ್ತಾಭಾರತಿ3 Aug 2016 11:28 PM IST
share
ಆನಂದಿ ಬೆನ್ ಪಟೇಲ್ ಎಂಬ ಹರಕೆಯ ಕುರಿ

 ಯಾವ ಗುಜರಾತ್‌ನ ಮೂಲಕ ಬಿಜೆಪಿ ತನ್ನ ಅಸ್ತಿತ್ವವನ್ನು ದೇಶಾದ್ಯಂತ ಬಲಗೊಳಿಸಿತ್ತೋ ಅದೇ ಗುಜರಾತ್‌ನಲ್ಲಿ ಬಿಜೆಪಿ ಸಣ್ಣಗೆ ಕಂಪಿಸುತ್ತಿದೆ. ನಾಲ್ದಿಕ್ಕುಗಳಿಂದಲೂ ಬಿಜೆಪಿ ಸವಾಲುಗಳನ್ನು ಎದುರಿಸುತ್ತಿದೆೆ. ನರೇಂದ್ರ ಮೋದಿಯ ಭ್ರಾಮಕ ಬಣ್ಣಗಳು ಒಂದೊಂದಾಗಿ ಕಳಚುತ್ತಿದ್ದಂತೆಯೇ ಗುಜರಾತ್‌ನಲ್ಲಿ ಪ್ರತಿಭಟನೆಗಳು ಭುಗಿಲೇಳುತ್ತಿವೆ. ಅಮಿತ್ ಶಾ, ನರೇಂದ್ರ ಮೋದಿ ವರ್ಚಸ್ಸು ಗುಜರಾತ್ ಬಿಜೆಪಿಯನ್ನು ಉಳಿಸುವಲ್ಲಿ ವಿಫಲವಾಗುತ್ತಿದೆ. ಆರೆಸ್ಸೆಸ್ ಮತ್ತು ಸಂಘಪರಿವಾರದ ದಿಕ್ಕುದೆಸೆಯಿಲ್ಲದ ಸಿದ್ಧಾಂತಗಳೇ ಬಿಜೆಪಿಗೆ ಮುಳುವಾಗಿರುವುದು ವಿಪರ್ಯಾಸವಾಗಿದೆ. ಇಂದು ಬಿಜೆಪಿಗೆ ಬಿಜೆಪಿಯೇ ಶತ್ರುವಾಗಿ ಗುಜರಾತ್‌ನಲ್ಲಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸಹಿತ ಯಾವುದೇ ವಿರೋಧ ಪಕ್ಷಗಳ ಅಗತ್ಯವೇ ಇಲ್ಲದೆ ಬಿಜೆಪಿ ಗುಜರಾತ್‌ನಲ್ಲಿ ಆತಂಕವನ್ನು ಎದುರಿಸುತ್ತಿದೆ. ಅಂತಿಮವಾಗಿ ತನ್ನೆಲ್ಲ ವೈಫಲ್ಯಗಳನ್ನು ಆನಂದಿ ಬೆನ್ ಪಟೇಲ್ ಎನ್ನುವ ಹಿರಿಯ ಮಹಿಳೆಯ ತಲೆಗೆ ಕಟ್ಟಿ ಆಕೆಯನ್ನು ಬಲಿಕೊಡಲು ಬಿಜೆಪಿಯ ನಾಯಕ ಅಮಿತ್ ಶಾ ಹೊರಟಿದ್ದಾರೆ.

ಆದರೆ ಆನಂದಿ ಬೆನ್ ಪಟೇಲ್ ಗುಜರಾತ್‌ಗೆ ಹೆಸರಿಗಷ್ಟೇ ಮುಖ್ಯಮಂತ್ರಿಯಾಗಿದ್ದರು. ದಿಲ್ಲಿಯಲ್ಲಿ ಕುಳಿತು ಗುಜರಾತ್‌ನ್ನು ಆಳುತ್ತಿದ್ದುದು ಅಮಿತ್ ಶಾ. ಆದರೆ ಅದರ ಪರಿಣಾಮಗಳನ್ನೆಲ್ಲ ಅನುಭವಿಸುತ್ತಿದ್ದುದು ಆನಂದಿ ಬೆನ್ ಪಟೇಲ್. ಇದೀಗ ಸ್ವತಃ ಅವರೇ ತನ್ನ ಸ್ಥಾನವನ್ನು ತ್ಯಜಿಸಲು ಅತ್ಯಾತುರದಲ್ಲಿದ್ದಾರೆ. ‘‘ತನಗೆ ವಯಸ್ಸಾಯಿತು. ಯಾರಾದರೂ ಕಿರಿಯರು ಈ ಸ್ಥಾನವನ್ನು ತುಂಬುವುದು ಸೂಕ್ತ. ಆದುದರಿಂದ ರಾಜೀನಾಮೆ ನೀಡುತ್ತಿದ್ದೇನೆ’’ ಎಂದು ಅವರು ಹೇಳಿಕೆ ನೀಡಿದ್ದಾರೆ. ಅಂದರೆ, ಗುಜರಾತ್‌ನಲ್ಲಿ ಈವರೆಗೆ ನಡೆದಿರುವ ಎಲ್ಲ ವಿದ್ಯಮಾನಗಳಿಗೆ ಆನಂದಿ ಬೆನ್ ಅವರ ವಯಸ್ಸೇ ಕಾರಣ ಎಂದು ಬಿಜೆಪಿ ಹೇಳುತ್ತಿದೆಯೇ?

ಆನಂದಿ ಬೆನ್ ಪಟೇಲ್ ಅವರ ರಾಜೀನಾಮೆಯ ಹೇಳಿಕೆಯಲ್ಲಿ ಒಂದು ನೋವಿದೆ. ಅವರು ಅಧಿಕಾರಕ್ಕೇರಿ ಕುಳಿತಿದ್ದರೇ ಹೊರತು ಗುಜರಾತ್‌ನ ಅನಧಿಕೃತ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದುದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು. ಪಕ್ಷದ ಕುರಿತಂತೆ ಆಗಲಿ ಅಥವಾ ರಾಜ್ಯದ ಕುರಿತಂತೆ ಆಗಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಆನಂದಿ ಬೆನ್ ಅವರಿಗಿರಲಿಲ್ಲ. ಅವರ ಯಾವುದೇ ಸ್ವಂತ ನಿರ್ಧಾರಗಳನ್ನು, ಶಾಸಕರು ದಿಲ್ಲಿಗೆ ಹೋಗಿ ಪ್ರಶ್ನಿಸಿ ಬದಲಿಸಿಕೊಂಡು ಬರುತ್ತಿದ್ದರು. ಮಹಿಳಾ ಮುಖ್ಯಮಂತ್ರಿ, ಪಟೇಲ್ ಸಮುದಾಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ ಎಂದೆಲ್ಲ ನರೇಂದ್ರ ಮೋದಿ ಹೇಳಿಕೊಂಡರೂ, ಗುಜರಾತ್‌ನ ನಿಜವಾದ ಮುಖ್ಯಮಂತ್ರಿಯಾಗಿ ಅಮಿತ್ ಶಾ ಅವರೇ ಸರ್ವಾಧಿಕಾರವನ್ನು ಪ್ರದರ್ಶಿಸುತ್ತಿದ್ದರು. ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ದಿಲ್ಲಿಯಲ್ಲಿ ಕುಳಿತು ತೆಗೆದುಕೊಂಡ ನಿರ್ಧಾರದಿಂದಾಗಿ ಸಿಖ್ ಕೃಷಿಕರು ಬೀದಿಪಾಲಾಗಬೇಕಾಯಿತು.

ಆದರೆ ಆ ಪ್ರತಿಭಟನೆಯ್ನ ನೇರವಾಗಿ ಹೊಣೆ ಹೊರಬೇಕಾಗಿದ್ದು ಮಾತ್ರ ಆನಂದಿ ಬೆನ್ ಪಟೇಲ್. ಇದಾದ ಬಳಿಕ ಗುಜರಾತ್‌ನಾದ್ಯಂತ ಪಟೇಲರು ಬೀದಿಗಿಳಿದರು. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯರಾಗಿರುವ ಪಟೇಲರ ಈ ದಂಗೆ ಬಿಜೆಪಿಗೆ ಭಾರೀ ಆಘಾತ ನೀಡಿದ್ದು ಸತ್ಯ. ಪಟೇಲರ ಯುವ ನಾಯಕ ಹಾರ್ದಿಕ್ ಪಟೇಲನನ್ನು ದೇಶದ್ರೋಹದ ಆರೋಪದಲ್ಲಿ ಜೈಲಿಗೆ ತಳ್ಳಿದ್ದು, ಪ್ರತಿಭಟನೆಯನ್ನು ನಿರ್ದಯವಾಗಿ ದಮನಿಸಲು ಪೊಲೀಸರನ್ನು ಬಳಸಿಕೊಂಡದ್ದು ಪಟೇಲರನ್ನು ತೀವ್ರವಾಗಿ ಕೆರಳಿಸಿತ್ತು. ಆದರೆ ಆ ಆಕ್ರೋಶದಿಂದ ಪಾರಾಗಲು ಪಟೇಲ್ ಸಮುದಾಯದ ಮುಖ್ಯಮಂತ್ರಿ ಆನಂದಿ ಬೆನ್ ಅವರನ್ನೇ ಗುರಾಣಿಯಾಗಿ ಬಳಸಿಕೊಂಡಿತು. ತಮ್ಮದೇ ಸಮುದಾಯದ ಮುಖ್ಯಮಂತ್ರಿ ಗುಜರಾತ್‌ನ್ನು ಆಳುತ್ತಿದ್ದಾರೆ ಎಂದು ತೋರಿಸಿ ಅವರ ಧ್ವನಿಯನ್ನು ಮೃದುವಾಗಿಸಲು ಹವಣಿಸಿತು. ಆದರೆ ದಿಲ್ಲಿಯಲ್ಲಿ ಕುಳಿತ ಅಮಿತ್ ಅದರಲ್ಲೂ ವಿಫಲವಾದರು. ಪಟೇಲ್ ಸಮುದಾಯದ ಮುಖಂಡರು ಬಹಿರಂಗವಾಗಿಯೇ ಮೋದಿ ಮತ್ತು ಬಿಜೆಪಿಯ ವಿರುದ್ಧ ಹೇಳಿಕೆಯನ್ನು ನೀಡತೊಡಗಿದರು. ಆದರೆ ಸಂಘಪರಿವಾರದ ಮನು ಸಿದ್ಧಾಂತದ ಅನುಷ್ಠಾನದ ಭರದಲ್ಲಿ ದಲಿತರ ಮೇಲೆ ಯಾವಾಗ ದೌರ್ಜನ್ಯಗಳು ವ್ಯಾಪಕವಾದವೋ ಆಗ ಆನಂದಿ ಬೆನ್ ಅವರಿಗೆ ತನ್ನ ವಯಸ್ಸು ನೆನಪಾಯಿತು. ಯಾಕೆಂದರೆ ಈ ದೌರ್ಜನ್ಯವನ್ನು ತಡೆಯುವ ಯಾವ ಶಕ್ತಿಯೂ ತನ್ನಲ್ಲಿಲ್ಲ. ಇಡೀ ಸರಕಾರವನ್ನು ಸಂಘಪರಿವಾರ ನಿಯಂತ್ರಿಸುತ್ತಿದೆ. ಗೋರಕ್ಷಣೆಯ ಹೆಸರಲ್ಲಿ ದಲಿತರನ್ನು ಥಳಿಸುತ್ತಿರುವುದೇ ಸಂಘಪರಿವಾರವಾಗಿರುವಾಗ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾದವರು ಯಾರು?

ಈ ಸಂದರ್ಭದಲ್ಲಿ ವೌನ ಮುರಿಯಬೇಕಾದ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರು ಎಲ್ಲಕ್ಕೂ ಕಾರಣ ಆನಂದಿ ಬೆನ್ ಎಂದು ಬೆರಳು ತೋರಿಸುತ್ತಿದ್ದಾರೆ. ಅಮಿತ್ ಶಾ ಅವರ ಪರಿವಾರ ಮಾಡುತ್ತಿರುವ ಅನಾಹುತಗಳ ಹೊಣೆ ಹೊತ್ತುಕೊಳ್ಳುವ ಕಾರಣಕ್ಕಾಗಿಯೇ ಗುಜರಾತ್‌ನ ಮುಖ್ಯಮಂತ್ರಿಯಾಗುವುದಕ್ಕಿಂತ ರಾಜೀನಾಮೆ ನೀಡುವುದೇ ಹೆಚ್ಚು ಕ್ಷೇಮಕರ ಎಂದು ಬೆನ್ ಅವರಿಗೆ ಅನ್ನಿಸಿದೆ. ಇದೇ ಸಂದರ್ಭದಲ್ಲಿ ಸದ್ಯದ ದಲಿತರ ಪ್ರತಿಭಟನೆ, ಪಟೇಲರ ಆಕ್ರೋಶ ಇವೆಲ್ಲಕ್ಕೂ ಬಿಜೆಪಿ ನೀಡಿದ ಸ್ಪಂದನೆಯೇ ಆನಂದಿ ಬೆನ್ ರಾಜೀನಾಮೆ ಎಂದು ಪ್ರತಿಪಾದಿಸಲು ಅಮಿತ್ ಶಾ ಹೊರಟಿದ್ದಾರೆ. ಮುಖ್ಯಮಂತ್ರಿಯವರನ್ನು ಬದಲಿಸುವ ಮೂಲಕ ದಲಿತರ, ಪಟೇಲರ ಬೇಡಿಕೆಗೆ ಸ್ಪಂದಿಸುತ್ತಿದ್ದೇವೆ ಎಂಬ ಸಂದೇಶವನ್ನು ಅವರು ಗುಜರಾತಿಗೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆ ಸಂದೇಶವನ್ನು ದಲಿತರು ಮತ್ತು ಪಟೇಲರು ಒಪ್ಪುವುದು ತೀರಾ ಕಷ್ಟ. ಯಾಕೆಂದರೆ, ಸದ್ಯ ಗುಜರಾತ್‌ನಲ್ಲಿ ಸಮಸ್ಯೆ ಬಿಗಡಾಯಿಸುವುದಕ್ಕೆ ಆಡಳಿತ ವ್ಯವಸ್ಥೆ ಕಾರಣ ಅಲ್ಲ. ಸಂಘಪರಿವಾರ ಅಲ್ಲಿ ಪರ್ಯಾಯ ಸರಕಾರವೊಂದನ್ನು ನಡೆಸುತ್ತಿರುವುದು ಅಲ್ಲಿನ ದೌರ್ಜನ್ಯ, ಹಿಂಸಾಚಾರಗಳಿಗೆ ಕಾರಣ. ಆನಂದಿಬೆನ್ ಬದಲಾದಾಕ್ಷಣ ಸಂಘಪರಿವಾರ ತನ್ನ ಕಾರ್ಯಚಟುವಟಿಕೆಗಳನ್ನು ನಿಲ್ಲಿಸುತ್ತದೆಯೆ? ಗುಜರಾತ್‌ನ ಮುಖ್ಯಮಂತ್ರಿಯಾಗಿ ಅಮಿತ್ ಶಾ ಅಧಿಕಾರವಹಿಸಿಕೊಳ್ಳುವ ವದಂತಿಯೊಂದಿತ್ತು.

ಆದರೆ ಸದ್ಯಕ್ಕೆ ಗುಜರಾತ್‌ನ ಮುಖ್ಯಮಂತ್ರಿ ಕುರ್ಚಿ ಮುಳ್ಳಿನ ಆಸನವಾಗಿದೆ. ಅದನ್ನೇರಿ ಕುಳಿತುಕೊಳ್ಳುವ ಧೈರ್ಯ ಅವರಿಗಿಲ್ಲ. ಆದುದರಿಂದ ಅವರು ಇನ್ನೊಬ್ಬ ಬಲಿಪಶುವನ್ನು ಹುಡುಕುತ್ತಿದ್ದಾರೆ. ಯಾರೇ ಬಂದು ಕುಳಿತರೂ ಗುಜರಾತ್‌ನ ಪರಿಸ್ಥಿತಿಯಲ್ಲಿ ವಿಶೇಷ ಬದಲಾವಣೆಗಳಾಗದು. ಯಾಕೆಂದರೆ ಅಲ್ಲಿನ ಅತಿ ದೊಡ್ಡ ಸಮಸ್ಯೆಯೇ ಸಂಘಪರಿವಾರ ಮನಸ್ಥಿತಿ. ಅವುಗಳನ್ನು ತಿದ್ದುವ ಶಕ್ತಿ ಅಮಿತ್ ಶಾಗಾಗಲಿ, ನರೇಂದ್ರ ಮೋದಿಗಾಗಲಿ ಇಲ್ಲ. ಇದೇ ಸಂದರ್ಭದಲ್ಲಿ ಗುಜರಾತ್‌ನಲ್ಲಿ ದಲಿತರು ಗೋವಿನ ವಿಷಯದಲ್ಲಿ ಒಂದಾಗಿದ್ದಾರೆ. ದಲಿತರನ್ನು ಮತ್ತೆ ಒಲಿಸಿಕೊಳ್ಳಬೇಕಾದರೆ ಗೋಹತ್ಯೆ ಕುರಿತಂತೆ ಇರುವ ತನ್ನ ನಿಲುವುಗಳನ್ನೇ ಸಂಘಪರಿವಾರ ಬದಲಿಸಬೇಕಾಗುತ್ತದೆ. ಇದು ಸದ್ಯಕ್ಕಂತೂ ಸಾಧ್ಯವಿರುವ ಮಾತಲ್ಲ. ಸಮೀಕ್ಷೆಯೊಂದರ ಪ್ರಕಾರ ಗುಜರಾತ್‌ನಲ್ಲಿ ತಕ್ಷಣ ಚುನಾವಣೆಯೇನಾದರೂ ನಡೆದರೆ ಬಿಜೆಪಿ ಧೂಳೀಪಟವಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಕೇವಲ ಗುಜರಾತ್‌ಗೆ ಸೀಮಿತವಾಗಿ ಉಳಿಯುವುದಿಲ್ಲ. ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಗಳು ಬಟಾಬಯಲಾಗುತ್ತಿವೆ. ಜನವಿರೋಧಿ ಆಳ್ವಿಕೆಗೆ ಜನರು ನಿಧಾನಕ್ಕೆ ರೊಚ್ಚಿಗೇಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಂಘಪರಿವಾರ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಲಾಭ ಪಡೆಯಲು ಹವಣಿಸುತ್ತಿದೆ. ಇವೆಲ್ಲವೂ ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ, ಸಂಘಪರಿವಾರದ ಮುಖವಾಡ ಕಳಚಿ ಬಿದ್ದೇ ಬೀಳುತ್ತದೆ ಎನ್ನುವುದಕ್ಕೆ ಗುಜರಾತ್ ಉದಾಹರಣೆಯಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X