ಇಬ್ಬರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ
ಕಾರ್ಕಳ, ಆ.3: ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ನಲ್ಲೂರು ಪಡೀಲ್‌ಕಟ್ಟೆ ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಪಡೀಲ್‌ಕಟ್ಟೆಯ ಯಾಸ್ಮಿನ್(34) ಹಾಗೂ ಆಕೆಯ ಇಬ್ಬರು ಮಕ್ಕಳಾದ ಈರಂ ಫಾತಿಮಾ ಖಾನ್(7) ಮತ್ತು ಮಹಮ್ಮದ್ ಅಫಾನ್ ಖಾನ್(5) ಎಂದು ಗುರುತಿಸಲಾಗಿದೆ.
ಯಾಸ್ಮೀನ್ ಜು.30ರಂದು ಚಿಕಿತ್ಸೆಗೆ ಕಾರ್ಕಳದ ವೈದ್ಯರಲ್ಲಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಸು ಬಾರದೆ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story





