ಬಾವಿಗೆ ಹಾರಿ ಆತ್ಮಹತ್ಯೆ
ಬೈಂದೂರು, ಆ.3: ಬೆನ್ನು ಹಾಗೂ ಕಾಲುನೋವಿನ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಯೊಬ್ಬರು ಆತ್ಮಹತ್ಯೆ ಮಾಡಿದ ಘಟನೆ ಸುಬ್ರಾಯಮಕ್ಕಿ ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಜಟ್ಟ ದೇವಾಡಿಗ (85) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಅವರು ಕೆಲಸ ಮಾಡುವ ಬೈಂದೂರು ಗ್ರಾಮದ ಸುಬ್ರಾಯಮಕ್ಕಿಯ ಸಂಜಯ ಶೇರಿಗಾರ ಎಂಬವರ ತೋಟ ದಲ್ಲಿರುವ ಬಾವಿಗೆ ಕೆಂಪು ಕಲ್ಲನ್ನು ಕುತ್ತಿಗೆಗೆ ಕಟ್ಟಿಕೊಂಡು ಹಾರಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





