ಯುವಕ ನಾಪತ್ತೆ
ಪಡುಬಿದ್ರೆ, ಆ.3: ಪೈಟಿಂಗ್ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ನಾಪತ್ತೆಯಾದ ಘಟನೆ ಕಂಚಿನಡ್ಕ ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಕಂಚಿನಡ್ಕ ನಿವಾಸಿ ಜಯರಾಮ ಎಂಬವರ ಮಗ ಸಂತೋಷ(31) ಎಂದು ಗುರುತಿಸಲಾಗಿದೆ. ಇವರು ಜು.31ರಂದು ಪಡುಬಿದ್ರೆ ಪೇಟೆಗೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.
ಎಣ್ಣೆ ಕಪ್ಪು ಮೈಬಣ್ಣ, 5 ಅಡಿ 8 ಇಂಚು ಎತ್ತರ, ಸಾಧಾರಣ ಶರೀರ ಹೊಂದಿರುವ ಇವರು ತುಳು, ಕನ್ನಡ, ಬ್ಯಾರಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ನೀಲಿ ಬಿಳಿ ಅಡ್ಡ ಪಟ್ಟಿ ಇರುವ ಟೀ ಶರ್ಟ್ ಧರಿಸಿದ್ದಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





