ನಿಧನ
ತಿಮ್ಮಪ್ಪ ಶೆಟ್ಟಿ
ಪುತ್ತೂರು, ಆ.3: ತುಳು ಮತ್ತು ಕನ್ನಡ ಚಿತ್ರನಟ, ನಿರ್ದೇಶಕ ಶಿವಧ್ವಜ್ ಅವರ ತಂದೆ ಕೆ.ಪಿ. ತಿಮ್ಮಪ್ಪಶೆಟ್ಟಿ(82) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ಪುತ್ತೂರಿನ ಖಾಸಗಿ ಆಸ್ಪತ್ರೆಲ್ಲಿ ನಿಧನರಾದರು.
ಅವರು ಕಳೆದ 15 ದಿನಗಳ ಹಿಂದೆ ಮನೆಯಲ್ಲಿ ಕಾಲುಜಾರಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ ವಾರದ ಹಿಂದೆ ಲಘು ಹೃದಯಾಘಾತವಾಗಿತ್ತು. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಿಮ್ಮಪ್ಪ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿ ಮತ್ತು ನಟ ಶಿವಧ್ವಜ್ ಸಹಿತ ಇಬ್ಬರು ಪುತ್ರರನ್ನು ಅಗಲಿದ್ದಾರೆ.
Next Story





