Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪೊರೆವಂತೆ ಕೈಚಾಚಿ ನಿಂತ ಶಾಂತ...

ಪೊರೆವಂತೆ ಕೈಚಾಚಿ ನಿಂತ ಶಾಂತ ಮುಖಮುದ್ರೆಯ ಮೂರ್ತಿ

ಎಲ್ಲರ ಚಿತ್ತ ರಿಯೋನತ್ತ..

ಡಾ. ಎಚ್. ಎಸ್. ಅನುಪಮಾಡಾ. ಎಚ್. ಎಸ್. ಅನುಪಮಾ4 Aug 2016 12:16 AM IST
share
ಪೊರೆವಂತೆ ಕೈಚಾಚಿ ನಿಂತ ಶಾಂತ ಮುಖಮುದ್ರೆಯ ಮೂರ್ತಿ

ರಿಯೋ ಎಂಬ ಭವ್ಯ ನಗರಕ್ಕೆ ಫವೇಲಾಗಳು ಕಪ್ಪುಚುಕ್ಕೆಯೆಂದು ಆಳುವವರ ಭಾವನೆ. ಕೆಲವೆಡೆ ಅವು ಮತ್ತೆ ಬೆಳೆಯದಂತೆ ತಡೆಯಲು ನಗರಾಡಳಿತ ಸುತ್ತ ಎತ್ತರದ ಗೋಡೆ ಕಟ್ಟಿದೆ. 70ರ ದಶಕದ ಮಿಲಿಟರಿ ಆಡಳಿತವು ಫವೇಲಾ ನಿರ್ಮೂಲನಾ ಕಾರ್ಯಕ್ರಮ ಹಾಕಿಕೊಂಡು ಅಲ್ಲಿದ್ದವರನ್ನು ಒಕ್ಕಲೆಬ್ಬಿಸಿ ಬೇರೆ ಕಡೆ ಮನೆ ಕಟ್ಟಿಕೊಟ್ಟಿತು. 2014ರಲ್ಲಿ ವಿಶ್ವ ಫುಟ್ಬಾಲ್ ಪಂದ್ಯಾವಳಿ ನಡೆಯಿತು. 2016ರಲ್ಲಿ ಒಲಿಂಪಿಕ್ಸ್. ವಿಶ್ವದ ಗಮನ ಸೆಳೆವ ಅಂಥ ಸಂದರ್ಭಗಳಲ್ಲಿ ಸುರಕ್ಷತೆ, ಸ್ವಚ್ಛತೆ, ಶಿಸ್ತಿಗೆ ಪ್ರಾಮುಖ್ಯತೆ ಹೆಚ್ಚಿರುತ್ತದೆ. ಎಂದೇ ಫವೇಲಾಗಳನ್ನು ನಗರದ ಭಾಗವಾಗಿ ಪರಿಗಣಿಸಿ ಸುರಕ್ಷೆಗೆ ಪೊಲೀಸ್ ವ್ಯವಸ್ಥೆ, ಮತದಾನ, ಸೌಲಭ್ಯ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಫವೇಲಾಗಳ ಜನರಿಗೆ ಬೇರೆಡೆ ವಸತಿ ವ್ಯವಸ್ಥೆ ಮಾಡಿ ಜೀವನ ಪರಿಸ್ಥಿತಿ ಸುಧಾರಿಸುವಂತಹ ಕ್ರಮಗಳನ್ನು ನಗರ ಆಡಳಿತವು ಕೈಗೊಳ್ಳುತ್ತ ಬಂದಿದೆ. ಬಿಷಪ್, ಚರ್ಚು, ಮಿಲಿಟರಿ, ನಗರಾಡಳಿತ ಎಲ್ಲರೂ ಸೇರಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಯೋಜನೆಯನ್ನು ನಿಭಾಯಿಸುವಲ್ಲಿನ ಅಸಮರ್ಪಕತೆಯಿಂದ ಫವೇಲಿಗರ ಪುನರ್ವಸತಿಗೆಂದು ಸೃಷ್ಟಿಯಾದ ‘ದೇವರ ನಗರ’ - ಸಿದಾದೆ ಜಿ ಜ್ಯೂಸ್ (ಹರಿಜನ ಕಾಲನಿ?) ಗಳು ಹೊಸ ಫವೇಲಾಗಳಾಗಿ ರೂಪುಗೊಂಡವು. ತೆರವು, ಪುನರ್ವಸತಿ ಕಾರ್ಯಾಚರಣೆಗಳು ಹಿಂಸೆಯನ್ನು ಪ್ರಚೋದಿಸಿ ಹೊಸಹೊಸ ಗ್ಯಾಂಗ್‌ಗಳು ಹುಟ್ಟಿಕೊಂಡವು. ವರ್ಷಕ್ಕೆ 28 ಲಕ್ಷ ಪ್ರವಾಸಿಗಳು ಬರುವ ನಗರಕ್ಕೆ ನಗರವಾಸಿಗಿಂತ ಪ್ರವಾಸಿ ಮುಖ್ಯ! ವರ್ಷಕ್ಕೆ 6,000 ಕೊಲೆಗಳಾಗುವ ಈ ನಗರ ಸುರಕ್ಷಿತವಲ್ಲವೆಂದು ಪ್ರವಾಸಿಗೆ ಅನಿಸಿದರೆ ರಿಯೋಗೆ ಬಹು ದೊಡ್ಡ ನಷ್ಟ. ಅದಕ್ಕೇ ಫವೇಲಾಗಳನ್ನು ಅಂತರ್ಗತಗೊಳಿಸಿ, ನಗರದ ಭಾಗವಾಗಿಸುವ, ಅದನ್ನು ಸುಸ್ಥಿತಿಯಲ್ಲಿಡುವ ನಾನಾ ಯತ್ನ, ಯೋಜನೆಗಳು ನಡೆಯುತ್ತಲೇ ಇವೆ.

ರಿಯೋ ಟೂರಿಸಂನಲ್ಲಿ ಸ್ಲಂ ಟೂರಿಸಂ ಕೂಡ ಒಂದು ಭಾಗವಾಗಿದೆ!

&1931ಕ್ರೈಸ್ಟ್ ದ ರೆಡೀಮರ್ (ಕ್ರಿಸ್ತು ರಿದ್ಯೆಂತೊರ್) ರಿಯೋ ಈಗ ಪ್ರಸಿದ್ಧವಾಗಿರುವುದು 2,300 ಅಡಿ ಎತ್ತರದ ಕೊರ್ಕೊವಾದೊ ಬೆಟ್ಟದ ತುತ್ತತುದಿಯ ಮೇಲಿರುವ ಕ್ರಿಸ್ತನ ಬೃಹತ್ ಪ್ರತಿಮೆ ‘ಕ್ರೈಸ್ಟ್ ದ ರೆಡೀಮರ್’ ನಿಂದ. ವಿಶ್ವದ ಆಧುನಿಕ ಏಳು ಅದ್ಭುತಗಳಲ್ಲಿ ಒಂದು ಎಂದು ಇದನ್ನು ಹೆಸರಿಸಲಾಗಿದೆ. ಟಿಜುಕಾ ಅರಣ್ಯದಿಂದ ಆವೃತವಾದ ಬೆಟ್ಟದ ತುದಿಯಲ್ಲಿ ತನ್ನೆರಡೂ ಕೈಗಳನ್ನು ತೆರೆದು ಕ್ರಿಸ್ತ ಕೊಂಚ ಕೆಳ ನೋಡುತ್ತ ರಿಯೋ ನಗರವನ್ನು ಹರಸುತ್ತಿರುವಂತೆ ಕಾಣುತ್ತದೆ. ವಿಶ್ವಾದ್ಯಂತ ಹರಡಿಕೊಂಡ ಕ್ರೈಸ್ತಮತದ ಕುರುಹಾಗಿ ‘ಜಗದೋದ್ಧಾರಕ ಕ್ರಿಸ್ತ’ ಎಂಬರ್ಥದ ಹೆಸರಿನ ಈ ಪ್ರತಿಮೆಯನ್ನು 100 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ. ರ ನಡುವೆ ಫ್ರೆಂಚ್ ಶಿಲ್ಪಿಯಿಂದ ನಿರ್ಮಾಣಗೊಂಡ 30 ಮೀಟರ್ ಎತ್ತರದ ಈ ಪ್ರತಿಮೆ ಆಧುನಿಕ ತಂತ್ರಜ್ಞಾನ, ಪಾರಂಪರಿಕ ಕಲೆ ಎರಡನ್ನೂ ಢಾಳಾಗಿ ಮಿಶ್ರ ಮಾಡುವ ಆರ್ಟ್ ಡೆಕೊ ಪ್ರಕಾರದಲ್ಲಿ ರಚಿತವಾದದ್ದು. ಇದು ಶಿಲಾ ವಿಗ್ರಹವಲ್ಲ. ಸಿಮೆಂಟ್ ಕಾಂಕ್ರೀಟ್ ಹಾಗೂ ಅಭ್ರಕ (ಕಾಗೆಬಂಗಾರ ಅಥವಾ ಸೋಪ್‌ಸ್ಟೋನ್)ದಿಂದ ತಯಾರಾಗಿದ್ದು. ಕ್ರಿಸ್ತನ ಮುಖವನ್ನು ಪಾಲ್ ಲಿಂಡೋವ್ಸ್ಕಿ ಎಂಬ ಶಿಲ್ಪಿಪ್ರತ್ಯೇಕವಾಗಿ ರೂಪಿಸಿದ. ಅದರ ಭಾಗಗಳನ್ನು ಬೇರೆಬೇರೆಯಾಗಿ ನಿರ್ಮಿಸಿ ಬ್ರೆಝಿಲ್‌ಗೆ ತಂದು ಸೇರಿಸಲಾಯಿತು. 30 ಮೀ. ಎತ್ತರದ ಮೂರ್ತಿ 8 ಮೀಟರ್ ಕಟ್ಟೆಯ ಮೇಲೆ ನಿಂತಿದೆ. ಬ್ರೆಝಿಲ್‌ನ ಕ್ರೈಸ್ತ ಧರ್ಮಗುರುಗಳಿಗೆ 1850ರ ಸುಮಾರಿಗೆ ಪೋರ್ಚುಗಲ್ಲಿನ ರಾಜಕುಮಾರಿ ಇಸಬೆಲ್ಲಾಳ ಗೌರವಾರ್ಥ ರಿಯೋ ನಗರದ ಕೊರ್ಕೊವಾದೊ ಬೆಟ್ಟದ ಮೇಲೆ ಕ್ರೈಸ್ತ ಸ್ಮಾರಕವೊಂದನ್ನು ನಿಲಿಸುವ ಹಂಬಲವಾಯಿತು. ಆ ಕುರಿತು ಆಳುವವರಿಗೆ ಪ್ರಸ್ತಾಪ ಸಲ್ಲಿಸಿದ್ದರೂ ಅದು ಊರ್ಜಿತವಾಗಲಿಲ್ಲ. ಕೊನೆಗೆ 1920ರ ಹೊತ್ತಿಗೆ ‘ಬ್ರೆಝಿಲ್ ಸಮಾಜದಲ್ಲಿ ದೇವನಿಲ್ಲದ ಸ್ಥಿತಿ ನಿರ್ಮಾಣವಾಗತೊಡಗಿದೆ’ ಎಂದು ಭಯಗೊಂಡ ರಿಯೋ ಕ್ಯಾಥೊಲಿಕ್ ಸರ್ಕಲ್ ಸಹಿ ಮತ್ತು ಹಣ ಸಂಗ್ರಹ ಅಭಿಯಾನ ಕೈಗೊಂಡು ಸ್ಮಾರಕ ನಿರ್ಮಿಸುವ ಒತ್ತಾಯ ತಂದಿತು. ವಿಶ್ವದ ಸಂಕೇತವಾಗಿ ಕಟ್ಟೆ, ವಿಶ್ವಶಾಂತಿಯ ಮತ್ತು ಶಿಲುಬೆಯ ಕುರುಹಾಗಿ ತೆರೆದ ಬಾಹುಗಳ ಕ್ರಿಸ್ತನನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಇವತ್ತಿನ ಲೆಕ್ಕದಲ್ಲಿ 33 ಲಕ್ಷ ಅಮೆರಿಕನ್ ಡಾಲರುಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರತಿಮೆಯ ಹೊರಕವಚವನ್ನು ಅಭ್ರಕದಿಂದ ಮಾಡಲಾಗಿದೆ. 2006ರಲ್ಲಿ ಬ್ರೆಝಿಲಿನ ಸಂತಳಾದ ಅವರ್ ಲೇಡಿ ಆಫ್ ಅಪಾರಿಷನ್ ಚರ್ಚ್ ಅನ್ನು ಪ್ರತಿಮೆಯ ಕೆಳಗೆ ನಿರ್ಮಿಸಿದ್ದು ಈಗಲ್ಲಿ ವಿವಾಹ ಮತ್ತಿತರ ಕ್ರೈಸ್ತವಿಧಿಗಳು ನೆರವೇರುತ್ತವೆ. ಾಳಿಮಳೆ, ಸಮುದ್ರ ವಾತಾವರಣಕ್ಕೆ ನಿರಂತರ ಮುಖವೊಡ್ಡಿ ನಿಂತ ಪ್ರತಿಮೆಯನ್ನು ಕಾಲಕಾಲಕ್ಕೆ ಸರಿಪಡಿಸುತ್ತ ಇರಬೇಕಾಗುತ್ತದೆ. ಈ 100 ವರ್ಷಗಳಲ್ಲಿ ರಿಪೇರಿಗೊಳ್ಳುತ್ತಾ ಹೋದಂತೆ ಮೊದಲಿನ ತಿಳಿಬಿಳಿಯ ಶುದ್ಧ ಅಭ್ರಕ ಸಿಗದ ಕಾರಣ ಅದರ ಬಣ್ಣ ದಟ್ಟೈಸುತ್ತ ಹೋಗಿದೆ. 2008ರಲ್ಲಿ ಗುಡುಗು ಸಿಡಿಲಿನ ಮಳೆಗೆ ಮೂರ್ತಿಯ ಹುಬ್ಬು, ತಲೆ ಮತ್ತು ಬೆರಳು ಹಾನಿಗೊಂಡವು. ಅದನ್ನು 2010ರಲ್ಲಿ ವಿಸ್ತೃತವಾಗಿ ರಿಪೇರಿ ಮಾಡಿದರು. ಕಾಂಕ್ರೀಟು, ಅಭ್ರಕ ಲೇಪ, ಒಳಗಿನ ಕಬ್ಬಿಣವೂ ಸೇರಿದಂತೆ ಎಲ್ಲವನ್ನು ನವೀಕರಣಗೊಳಿಸಲಾಯ್ತು. ಶಿಲೀಂಧ್ರ ಬೆಳೆಯದಂತೆ ವಾಟರ್ ಪ್ರೂಫ್ ಮಾಡಲಾಯಿತು. ಆ ವೇಳೆ ಯಾರೋ ಅದರ ಕೈಮೇಲೆ ಬಣ್ಣ ಎರಚಿ ವಿರೂಪಗೊಳಿಸಲು ನೋಡಿದರು. 2014ರಲ್ಲಿ ಸಿಡಿಲು ಬಡಿದು ಬಲಗೈಯ ಬೆರಳು ಬಿದ್ದು ಹೋಯಿತು. ಮೂರ್ತಿಯ ತಲೆ ಹಾಗೂ ಹಸ್ತಗಳ ಮೇಲೆ ಸಿಡಿಲು ನಿರೋಧಕ ಸರಳುಗಳನ್ನಿಟ್ಟು ಸರಿಪಡಿಸಲಾಯಿತು.

ವಿಶ್ವಶಾಂತಿ ಬೋಧಿಸಿದ ಏಸುವಿಗೂ ಬಡಿವ ಸಿಡಿಲು!

ಕಾಲದ ಮಹಿಮೆ, ನೆಲದ ಮಹಿಮೆ ಇದೇ ಏನು?!ಲ್ಲಿದ್ದಾನೆ, ನಮಗಾಗಿ..’ೊರ್ಕೊವಾದೊ ಬೆಟ್ಟದ ಮೇಲೆ ಹೋಗಲು ರಸ್ತೆಯಿಲ್ಲ. ಒಂದು ಜೋಡಿ ರೈಲು ಹಳಿಯಿರುವ ಕಿರಿದಾದ ರೈಲು ಮಾರ್ಗದಲ್ಲೆ ಪ್ರಯಾಣಿಸಬೇಕು. ಆಚೀಚಿನ ದಟ್ಟ ಕಾಡುಗಳ ನಡುವೆ ಪುಟ್ಟ ರೈಲು ಬೆಟ್ಟ ಹತ್ತುತ್ತದೆ. ಮೇಲಕ್ಕೇ ಕಣ್ಣು ಕೀಲಿಸಿದ್ದರೂ ಎಲ್ಲೂ ಕ್ರಿಸ್ತ ಕಾಣಲಿಲ್ಲ. ರೈಲಿಳಿದರೆ ಮತ್ತೂ ದಟ್ಟ ಕಾಡು. ಕೊನೆಗೆ ಒಂದು ಲಿಫ್ಟಿನೆದುರು ನಮ್ಮನ್ನು ಸಾಲಾಗಿ ನಿಲಿಸಿದರು. ಅಷ್ಟಷ್ಟೆ ಜನರ ಮೇಲೇರಿಸಿದರು. ಲಿಫ್ಟಿನಿಂದ ಹೊರಬಂದು ನೋಡಿದರೆ,ರೆಅರೆಅರೆ, ಎಂಥ ಸುಂದರ ದೃಶ್ಯ! ತಲೆ ಮೇಲೆತ್ತಿದರೆ ಕಾಣುತ್ತಿದ್ದಾನೆ ತಲೆಬಾಗಿ ನಿಂತಿರುವ ಕ್ರಿಸ್ತ. ಮೆಟ್ಟಿಲೇರಿ ಮೂರ್ತಿಯೆದುರು ನಿಂತು ಪೂರ ಕುತ್ತಿಗೆ ಹಿಂಬಾಗಿಸಿ ಕತ್ತು ಮೇಲೆತ್ತಿದರೆ ಆಗಸದಲ್ಲಿ ಹೊಳೆವ ಸೂರ್ಯನೊಟ್ಟಿಗೆ ಕ್ರಿಸ್ತನ ಮುಖ ಕಾಣಿಸಿತು. ನಮ್ಮ ಗೊಮಟೇಶ್ವರನಿಗಿಂತ ಎರಡು ಪಟ್ಟು ಎತ್ತರ ಇರುವ ಮೂರ್ತಿ. ತನ್ನ ಪಾದದ ಬುಡದಲ್ಲಿ ಗಿಜಿಗಿಜಿ ಇರುವೆಯಂತೆ ಹರಿವ ಜನ ಎಲ್ಲಿ ಕಾಲಡಿ ನೊಂದಾರೊ ಎಂದು ಪೊರೆವಂತೆ ಕೈಚಾಚಿ ನಿಂತ ಶಾಂತ ಮುಖಮುದ್ರೆಯ ಮೂರ್ತಿ.

"®

ಪರಮ ಕರುಣಾಳು ಕ್ರಿಸ್ತ. ಬಡವರಲ್ಲಿ ಬಡವನಾಗಿ, ನೋವಿರುವವರಲ್ಲಿ ನೋವುಣ್ಣುವವನಾಗಿ, ಈ ಜಗದ ಕಟ್ಟಕಡೆಯವರ್ಯಾರೋ ಅವರೊಡನೆ ಅವರಿಗಾಗಿಯೇ ಬದುಕಿದ ಕ್ರಿಸ್ತ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಹಾಡು ಎದೆಯೊಳಗಿನಿಂದೆದ್ದು ಬಂತು.ನ್ನ ಎಲುಬಿನ ಹಂದರದೊಳಗೊಂದು ಇಗರ್ಜಿಯಿದೆ.ಲ್ಲಿದೆ ಕಶೇರು, ಹೆಗಲ ಮೂಳೆಗಳಿಂದಾದ ಶಿಲುಬೆ.ಲ್ಲಿದ್ದಾನೆ ನಮಗಾಗಿ ಮೊಳೆಯ ಜಡಿಸಿಕೊಂಡು ನಿತ್ಯ ಮರುಗುವ ಏಸು ಕ್ರಿಸ್ತ..’

ಧರ್ಮ, ಅನುಯಾಯಿತ್ವ, ಆಸ್ತಿಕತೆ-ನಾಸ್ತಿಕತೆಗಳ ಹೊರತಾಗಿ ಆ ಎತ್ತರದಲ್ಲಿ ಕತ್ತೆತ್ತಿ ದಿಟ್ಟಿಸಿದಾಗ ಏನೋ ಒಂದು ಒಳಗೆಲ್ಲ ತುಂಬಿಕೊಂಡಂತಾಯಿತು. ಅದು ಭಕ್ತಿ-ನೆಮ್ಮದಿ-ಶಾಂತಿ ಎಲ್ಲವನ್ನೂ ಒಳಗೊಂಡಂತಿದ್ದ ಕಳವಳವಿಲ್ಲದ ನಿರ್ಲಿಪ್ತಿ. ಚಣಹೊತ್ತು ಮೈಮರೆಯು ವಂತೆ ಮಾಡುವ ಪರವಶತೆ. ದೋ ಅಲ್ಲಿ ನೀರ ನಡುವೆ ಲಂಗೋಟಿಯಂತಹ ಏರ್‌ಸ್ಟ್ರಿಪ್‌ನಿಂದ ವಿಮಾನ ಮೇಲೇರುತ್ತಿದೆ. ಇದೋ ಇಲ್ಲಿ ಸಾಲುಸಾಲು ಕಡಲ ಹಕ್ಕಿಗಳು ಕ್ರಿಸ್ತನ ಪ್ರತಿಮೆಗಿಂತ ಮೇಲೆ ಹಾರುತ್ತಿವೆ. ಈಗಷ್ಟೆ ನೆತ್ತಿ ಸುಟ್ಟಿದ್ದ ಸೂರ್ಯ ಅಂಟಾರ್ಕ್ಟಿಕಾ ಕಡೆಯಿಂದ ಬೀಸತೊಡಗಿದ ಶೀತಗಾಳಿಯ ಸೆಳವಿಗೆ ಸಿಕ್ಕನೊ ಎಂಬಂತೆ ಮೋಡದ ಹಿಂದೆ ಮರೆಯಾಗತೊಡಗಿದ್ದಾನೆ. ಈ ಎರಡು ಸಾವಿರ ವರುಷಗಳಲ್ಲಿ ಎಷ್ಟು ಕೋಟಿ ಜೀವಗಳು ಈ ಇವನ ಕರುಣೆಯ ದಿಟ್ಟಿಯಲ್ಲಿ ನೆಮ್ಮದಿಯ ನೆಲೆ ಕಂಡುಕೊಂಡಿವೆ? ಎಷ್ಟು ಕೋಟಿ ಸೋತ ಜೀವಗಳು ಅವನ ನುಡಿಯಲಿ ಬದುಕಿನ ಬೆಳಕು ಹುಡುಕಿಕೊಂಡಿವೆ?ಡಲೇ, ಹಕ್ಕಿಯೇ, ಶೀತಗಾಳಿಯೇ, ಪರವಶಕೆ ನನ್ನನೊಡ್ಡಿದ ದಿವ್ಯವೇ, ಬಿಟ್ಟುಹೋದೇವೇ ಈ ನೆಲವ ನಾವನುಭವಿಸಿದ ನೆಮ್ಮದಿ, ಚೆಲುವಿನೊಂದಿಗೆ? ನಮಗಾಗಿ ಮೊಳೆಯ ಜಡಿಸಿಕೊಂಡು ನಿತ್ಯ ಮರುಗುವ ಏಸು ಕ್ರಿಸ್ತನೇ, ಕರುಣವಾಗಿ ನೆಲೆಗೊಳಲಾರೆಯಾ ಮನುಜರ ಎಲುಬಿನ ಹಂದರದೊಳಗೆ? 

share
ಡಾ. ಎಚ್. ಎಸ್. ಅನುಪಮಾ
ಡಾ. ಎಚ್. ಎಸ್. ಅನುಪಮಾ
Next Story
X