ಲೆಫ್ಟಿನೆಂಟ್ ಗವರ್ನರೇ ದಿಲ್ಲಿಯ ಆಡಳಿತ ಮುಖ್ಯಸ್ಥರು: ಹೈಕೋರ್ಟ್
ಕೇಜ್ರಿವಾಲ್ಗೆ ಹಿನ್ನಡೆ
![ಲೆಫ್ಟಿನೆಂಟ್ ಗವರ್ನರೇ ದಿಲ್ಲಿಯ ಆಡಳಿತ ಮುಖ್ಯಸ್ಥರು: ಹೈಕೋರ್ಟ್ ಲೆಫ್ಟಿನೆಂಟ್ ಗವರ್ನರೇ ದಿಲ್ಲಿಯ ಆಡಳಿತ ಮುಖ್ಯಸ್ಥರು: ಹೈಕೋರ್ಟ್](https://www.varthabharati.in/sites/default/files/images/articles/2016/08/4/kejriwal-story759_647_050816025820.jpg)
ಹೊಸದಿಲ್ಲಿ, ಆ.4: ಲೆಫ್ಟಿನೆಂಟ್ ಗವರ್ನರ್ ದಿಲ್ಲಿಯ ಆಡಳಿತ ಮುಖ್ಯಸ್ಥರು ಎಂದು ಗುರುವಾರ ದಿಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಹೈಕೋರ್ಟ್ನ ಈ ತೀರ್ಪಿನಿಂದಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಹಿನ್ನಡೆ ಉಂಟಾಗಿದೆ.
ರಾಜ್ಯದಲ್ಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವನ್ನು ಪ್ರಶ್ನಿಸಿ ಆಮ್ ಆದ್ಮಿ ಪಾರ್ಟಿ(ಎಎಪಿ) ಸಲ್ಲಿಸಿದ್ದ ಅರ್ಜಿಯನ್ನೂ ದಿಲ್ಲಿ ಹೈಕೋರ್ಟ್ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.
ದಿಲ್ಲಿಯ ಸಂಪುಟದ ಸಲಹೆಯಂತೆ ಲೆಫ್ಟಿನೆಂಟ್ ಗವರ್ನರ್ ಕಾರ್ಯನಿರ್ವಹಿಸಬೇಕಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ.
Next Story