ಇನ್ನು ಟ್ಯಾಕ್ಸಿ ಬುಕ್ ಮಾಡಲು ಇಂಟರ್ನೆಟ್ ಬೇಡ!

ಹೈದರಾಬಾದ್: ಭಾರತದ ಇಂಟರ್‌ನೆಟ್ ಸ್ಪೀಡ್ ತೀರಾ ಕಡಿಮೆ ಇರುವ ಸಮಸ್ಯೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮತ್ತು ವಿಸ್ತೃತ ಗ್ರಾಹಕವರ್ಗವನ್ನು ತಲುಪುವ ಪ್ರಯತ್ನವಾಗಿ, ಸಣ್ಣ ಕಾರು, ಆಟೊ ಹಾಗೂ ಬೈಕ್ ಸೇವೆ ಒದಗಿಸುವ ಸಂಸ್ಥೆಗಳು ಇದೀಗ ಇಂಟರ್ನೆಟ್ ಬಳಕೆ ಮಾಡಿಕೊಳ್ಳದೇ ವಾಹನಗಳನ್ನು ಬುಕ್ ಮಾಡಲು ಅನುವಾಗುವಂತೆ ಕೆಲ ಆಫ್‌ಲೈನ್ ಲಕ್ಷಣಗಳನ್ನು ಸೇರಿಸಿವೆ.
ಇಕ್ಸಿಗೊ ಹಾಗೂ ಬಾಕ್ಸಿಯಂಥ ಸಂಸ್ಥೆಗಳು ಈ ಸೇವೆಯನ್ನು ನಾಲ್ಕು ತಿಂಗಳ ಹಿಂದೆಯೇ ಆರಂಭಿಸಿದ್ದರೆ, ಜುಗ್ನೂ ಹಾಗೂ ಎಎಚ್‌ಎ ಟ್ಯಾಕ್ಸೀಸ್, ಮುಂದಿನ ಕೆಲ ವಾರಗಳಲ್ಲಿ ಆಫ್‌ಲೈನ್ ಸೇವೆಗೆ ಚಾಲನೆ ನೀಡಲು ನಿರ್ಧರಿಸಿವೆ.
ಇಂಟರ್‌ನೆಟ್ ಸಂಪರ್ಕದ ವೇಗ ಕಡಿಮೆ ಇರುವ ಸಮಸ್ಯೆಯಿಂದಾಗಿ ಕ್ಯಾಬ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಮಂದಿ ಗ್ರಾಹಕರು ದೂರುತ್ತಿದ್ದಾರೆ ಎಂದು ಎಎಚ್‌ಎ ಟ್ಯಾಕ್ಸೀಸ್‌ನ ಪ್ರವೀಣ್ ಸಮರಿಯಾ ಹೇಳುತ್ತಾರೆ, "ಈ ಕಾರಣದಿಂದ ನಮ್ಮ ಸಂಸ್ಥೆ ಆಫ್‌ಲೈನ್ ಮೂಲಕ ಬುಕ್ ಮಾಡುವ ಸೇವೆ ಆರಂಭಿಸುತ್ತಿದೆ".
ಈ ಆಪ್‌ಗಳ ಆಫ್‌ಲೈನ್ ಲಕ್ಷಣಗಳು ಕೂಡಾ ಇಂಥದ್ದೇ ತಂತ್ರಜ್ಞಾನವನ್ನು ಅವಲಂಬಿಸಿವೆ. ಇದು ಹಿಂದಿನ ಕಟ್ಟಕಡೆಯ ಸ್ಥಳವನ್ನು ಅಥವಾ ಹೆಚ್ಚಾಗಿ ಪ್ರಯಾಣಿಕರು ಹತ್ತುವ ಸ್ಥಳವನ್ನು ಬಳಕೆ ಮಾಡಿಕೊಂಡು, ಗ್ರಾಹಕರ ಆಯ್ಕೆಗೆ ಅವಕಾಶ ನೀಡುತ್ತದೆ. ಒಂದು ಬಾರಿ ಸ್ಥಳವನ್ನು ಆಯ್ಕೆ ಮಾಡಿದ ಬಳಿಕ ಲಿಖಿತ ಸಂದೇಶವನ್ನು ಸೃಷ್ಟಿಸಿ ಸರ್ವರ್‌ಗೆ ಕಳುಹಿಸಲಾಗುತ್ತದೆ. ಇದು ಬಳಿಕ ಬುಕಿಂಗ್ ವಿವರಗಳೊಂದಿಗೆ ಗ್ರಾಹಕರಿಗೆ ಮಾಹಿತಿ ರವಾನಿಸುತ್ತದೆ.
"ಮೆಟಾಸರ್ಚ್ ಎಂಜಿನ್‌ನಿಂದಾಗಿ, ನಮ್ಮ ಆ್ಯಪ್ ಸನಿಹದಲ್ಲಿರುವ ಕ್ಯಾಬ್ ಅಥವಾ ಆಟೊವನ್ನು ಗುರುತಿಸಲು ಪ್ರಯತ್ನ ಮಾಡುತ್ತದೆ. ಈ ಮೂಲಕ ಗ್ರಾಹಕರು ಓಲಾ ಅಥವಾ ಉಬೇರ್ ಕಾರುಗಳನ್ನು ನಮ್ಮ ಆ್ಯಪ್‌ನ ಆಫ್‌ಲೈನ್ ಫೀಚರ್ ಮೂಲಕವೂ ಬುಕ್ ಮಾಡಬಹುದಾಗಿದೆ" ಎಂದು ಇಕ್ಸಿಗೋ ಸಿಇಓ ಹಾಗೂ ಸಹಸಂಸ್ಥಾಪಕ ಅಲೋಕ್ ಬಾಜಪೇಯಿ ಹೇಳುತ್ತಾರೆ.







