ವಿಶ್ವ ವಿಖ್ಯಾತ ಮೈಸೂರು ದಸರಾ ಅ.1ಕ್ಕೆ ಉದ್ಘಾಟನೆ
ವಿಜಯದಶಮಿಯಂದು ಜಂಬೂ ಸವಾರಿ
.jpg)
ಬೆಂಗಳೂರು, ಆ.3: ವಿಶ್ವ ವಿಖ್ಯಾತ ಮೈಸೂರು ದಸರಾ ಅ.1 ರಂದು ಬೆಳಗ್ಗೆ 11ಕ್ಕೆ ಉದ್ಘಾಟನೆಯಾಗಲಿದ್ದು, ಅ.11 ರಂದು ವಿಜಯ ದಶಮಿಗೆ ಜಂಬೂ ಸವಾರಿ ನಡೆಯಲಿದೆ ಎಂದು ಗುರುವಾರ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಬಾರಿಯ ಮೈಸೂರು ದಸರಾವನ್ನು ಸರಳ, ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ.
ದಸರಾ ಉದ್ಘಾಟನೆಗೆ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಸಾಹಿತಿಗಳಾದ ಎಸ್.ಎಲ್. ಬೈರಪ್ಪ, ನಿಸಾರ್ ಅಹಮದ್ ಹಾಗೂ ಚೆನ್ನವೀರ ಕಣವಿ ಅವರ ಹೆಸರನ್ನು ಪ್ರಸ್ತಾವಿಸಲಾಗಿದ್ದು, ಆ.9 ರಂದು ನಡೆಯಲಿರುವ ಸಭೆಯಲ್ಲಿ ಹೆಸರು ಅಂತಿಮಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ
Next Story





