ಅಮೆರಿಕ : ಕಂಗೆಟ್ಟು ಆಭರಣ ಮಾರಲು ಹೋದ ಮಹಿಳೆಗೆ ಅಚ್ಚರಿ ನೀಡಿದ ಮಳಿಗೆಯ ಸಿರಿಯನ್ ಮಾಲಕ

ಅಮೆರಿಕ,ಆ.4 : ಅಮೇರಿಕಾದ ಡಲ್ಲಾಸ್ ನಲ್ಲಿರುವಆಭರಣದ ಮಳಿಗೆಯೊಂದಕ್ಕೆಭೇಟಿ ನೀಡಿ ಆರ್ಥಿಕ ಕಾರಣಗಳಿಗಾಗಿ ತನ್ನ ಚಿನ್ನದ ಸರವೊಂದನ್ನು ಮಾರಲು ಯತ್ನಿಸಿದ ಮಹಿಳೆಗೆ ಅಂಗಡಿಯ ಸಿರಿಯನ್ ಮಾಲಕ ನೀಡಿದ ಅಚ್ಚರಿಯ ಬಗೆಗಿನ ವೀಡಿಯೋವೊಂದನ್ನುಅಮೇರಿಕಾ ಫಾರ್ ಅರಬ್ಸ್ ಎಂಬ ಫೇಸ್ ಬುಕ್ ಪುಟ ಅಪ್ ಜುಲೈ 17 ರಂದು ಅಪ್ ಲೋಡ್ ಮಾಡಿದ್ದು ಈ ವೀಡಿಯೋವನ್ನು 9.5 ಮಿಲಿಯನ್ಸ್ ಬಾರಿ ವೀಕ್ಷಿಸಲಾಗಿದೆಯಲ್ಲದೆ 3 ಲಕ್ಷಕ್ಕೂ ಅಧಿಕ ಮಂದಿ ಶೇರ್ ಕೂಡ ಮಾಡಿದ್ದಾರೆ.
ವೀಡಿಯೋದಲ್ಲಿ ಕಾಣಿಸಿದಂತೆ ಅಮೆರಿಕನ್ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳೊಂದಿಗೆ ಡಲ್ಲಾಸ್ ನಲ್ಲಿರುವ ಆಭರಣ ಅಂಗಡಿಗೆ ಹೋಗಿ ತನ್ನ ಸರವನ್ನು ಮಾರಾಟ ಮಾಡಲು ಯತ್ನಿಸುತ್ತಾಳೆ. ಆಗ ಅಂಗಡಿಯಾತ ‘‘ನೀವೇಕೆ ಸರವನ್ನು ಮಾರುತ್ತಿದ್ದೀರಿ?’’ ಎಂದು ಕೇಳಿದಾಗ ಆಕೆ ‘‘ನಾನು ಸಂಕಷ್ಟದಲ್ಲಿದ್ದೇನೆ. ಮುಂದಿನ ತಿಂಗಳ ತನಕ ನನಗೆವೇತನ ಸಿಗದು,’’ ಎನ್ನುತ್ತಾಳೆ.
ಆ ಸರವನ್ನು ಪರೀಕ್ಷಿಸಿದ ಅಂಗಡಿಯಾತ ಆ ಸರವನ್ನು ಮಹಿಳೆಗೆ ಆಕೆಯ ತಾಯಿ ಉಡುಗೊರೆಯಾಗಿ ನೀಡಿದ್ದಳು ಎಂಬುದನ್ನು ತಿಳಿದು ಕೊಂಡಾಗ ಆತ ಸರದ ಮೌಲ್ಯ ನಿರ್ಧರಿಸಿ ಮಹಿಳೆಗೆ ನೀಡಿ ನಂತರ ಆ ಸರವನ್ನೂ ಆಕೆಗೆ ಹಿಂದಿರುಗಿಸುತ್ತಾನೆ. ‘‘ಈ ಸರ ನಿಮಗೆ ಉಡುಗೊರೆಯಾಗಿ ಸಿಕ್ಕಿತ್ತೆನ್ನುತ್ತೀರಿ.ತೆಗೆದುಕೊಳ್ಳಿ,’’ ಎಂದು ಹಿಂದಕ್ಕೆ ಕೊಡುತ್ತಾನಲ್ಲದೆ ಒಂದು ಸಣ್ಣ ಚೀಟಿಯಲ್ಲಿ ತನ್ನ ಫೋನ್ ನಂಬರ್ ಬರೆದು‘‘ನನ್ನ ನಂಬರ್ ತೆಗೆದುಕೊಳ್ಳಿ. ನಿಮಗೇನಾದರೂ ಬೇಕಾದರೆ ಸಂಪರ್ಕಿಸಿ,’’ ಎಂದು ನೀಡುತ್ತಾನೆ. ಮಹಿಳೆಯ ಮಗನತ್ತ ತಿರುಗಿ ‘‘ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳು,’’ ಎನ್ನುತ್ತಾನೆ.ಅಂಗಡಿಯಾತ ಅಮೇರಿಕಾದ ಡಲ್ಲಾಸ್ ನಲ್ಲಿ ವಾಸವಿರುವ ಸಿರಿಯನ್ ಎಂದು ವೀಡಿಯೋದಲ್ಲಿ ಹೇಳಲಾಗಿದೆ.
ಈ ವೀಡಿಯೋದಲ್ಲಿ ಕಾಣಿಸಿರುವುದು ನಿಜ ಘಟನೆಯೋ ಅಥವಾ ಕಾಲ್ಪನಿಕವೋ ಎಂಬುದಿನ್ನೂ ದೃಢಪಟ್ಟಿಲ್ಲ.







