ಭಟ್ಕಳ: ಅಕ್ರಮ ಜಾನುವಾರು ಸಾಗಾಟ; ಆರೋಪಿಗಳು ಪರಾರಿ

ಭಟ್ಕಳ, ಆ.4: ಮಹಿಂದ್ರಾ ವಾಹನದಲ್ಲಿ ದಾಖಲೆ ರಹಿತವಾಗಿ 4ದನ ಹಾಗೂ 2 ಕರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದಡಿ ನಗರ ಠಾಣೆಯ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಜಾನುವಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಭಟ್ಕಳದ ಬದ್ರಿಯಾ ಕಾಲೋನಿ ಬೆಂಡೆಕಾನ್ ನಿವಾಸಿ ಅಬ್ದುಲ್ಲಾರಸೂಲ್ ಸಾಬ್ ಸವಣೂರು(24) ಹಾಗೂ ಶೇಡಕುಳಿ ಹೊಂಡಜಾಲಿ ರಸ್ತೆ ಭಟ್ಕಳದ ನಿವಾಸಿ ಆಹ್ಮದ್‌ರ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ವಿರುದ್ಧ 201/2016 ಕಲಂ 3, 8, 11ಲ ಕರ್ನಾಟಕ ಪ್ರಾಣಿ ಹತ್ಯೆ ಮತ್ತು ಪ್ರಾಣಿ ಸಂರಕ್ಷಣಾಕಾಯ್ದೆ 1964 ಹಾಗೂ ಪ್ರಾಣಿ ಹಿಂಸಾ ಪ್ರರೀಕ್ಷಣಾ ಕಾಯ್ದೆ 1960 ಮತ್ತು 192(ಎ) ಎಂ.ವಿ. ಆಕ್ಟ್ ಮತ್ತು 379ಐಪಿಸಿ ರಂತೆ ಪ್ರಕರಣ ನಗರಠಾಣೆ ಎಸ್ಸೈ ರೇವತಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಆರೋಪಿತರಿಂದ ಸುಮಾರು 15,000 ರೂ ಮೌಲ್ಯದ 4 ದನಗಳು ಹಾಗೂ 2 ಕರು, 50,000 ರೂ. ವೌಲ್ಯದ ವಾಹನ ಸಹಿತ ಒಟ್ಟು 65,000 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Next Story





