ಹೊಸಂಗಡಿ: ಮರಳು ಸಾಗಿಸುತ್ತಿದ್ದ ಎರಡು ಲಾರಿಗಳ ವಶ

ಮಂಜೇಶ್ವರ, ಆ.4: ಕರ್ನಾಟಕದಿಂದ ಕೇರಳಕ್ಕೆ ವ್ಯಾಪಕವಾಗಿ ಮರಳು ಸಾಗಿಸುತ್ತಿರುವ ಹಿನ್ನಲೆಯಲ್ಲಿ ಮಂಜೇಶ್ವರ ಎಸ್ಸೈ ಪಿ.ಪ್ರಮೋದ್ ನೇತೃತ್ವದ ಪೊಲೀಸರ ತಂಡ ಕಳೆದ ಹಲವಾರು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಗುರುವಾರ ಮುಂಜಾನೆ ಹೊಸಂಗಡಿ ಬಳಿಯ ಅಂಗಡಿಪದವಿನಿಂದ ಎರಡು ಮರಳು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಲಕರು ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.
ಆನೆಕಲ್ಲು ಕಡೆಯಿಂದ ಹೊಸಂಗಡಿ ಕಡೆಗೆ ಸಾಗುತ್ತಿದ್ದ ಎರಡು ಕರ್ನಾಟಕ ನೋಂದಾಯಿತ ಲಾರಿಗಳನ್ನು ಅಂಗಡಿಪದವಿನಲ್ಲಿ ತಪಾಸಣೆ ನಡೆಸಿದಾಗ ಚಾಲಕರು ಲಾರಿಯಲ್ಲಿ ಇರುವುದು ಸಿಮೆಂಟ್ ಎಂದು ಹೇಳಿದ್ದರು. ಶಂಕೆಯ ಹಿನ್ನೆಲೆಯಲ್ಲಿ ತಪಾಸಣೆ ನಡೆಸುತ್ತಿದ್ದಂತೆ ಚಾಲಕರು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಲಾರಿಗಳಿಗೆ ಪ್ಲಾಸ್ಟಿಕ್ ಹೊದಿಸಿ ಮರಳು ಸಾಗಾಟ ನಡೆಸಲಾಗುತ್ತಿತ್ತು. ಚಾಲಕರ ವಿರುದ್ಧ ದೂರು ದಾಖಲಾಗಿದೆ.
Next Story





