ಪೀಪ್ಲಿ ಲೈವ್ ಸಹ-ನಿರ್ದೇಶಕನಿಗೆ 7 ವರ್ಷ ಕಾರಾಗೃಹ ಶಿಕ್ಷೆ
ಅಮೆರಿಕನ್ ಮಹಿಳೆಯ ಅತ್ಯಾಚಾರ
ಹೊಸದಿಲ್ಲಿ, ಆ.4: ಅಮೆರಿಕನ್ ಮಹಿಳೆಯೊಬ್ಬರ ಅತ್ಯಾಚಾರ ಪ್ರಕರಣದಲ್ಲಿ ದಿಲ್ಲಿಯ ಸಾಕೇತ್ ನ್ಯಾಯಾಲಯವು ಗುರುವಾರ, ‘ಪೀಪ್ಲಿ ಲೈವ್’ನ ಸಹ ನಿರ್ದೇಶಕ ಮಹ್ಮೂದ್ ಫಾರೂಕಿಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಅಪರಾಧಿಗೆ ನ್ಯಾಯಾಲಯ ರೂ.50 ಸಾವಿರ ದಂಡವನ್ನೂ ವಿಧಿಸಿದೆ. ಚಿತ್ರ ನಿರ್ಮಾಪಕನಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
2015ರಲ್ಲಿ 35ರ ಹರೆಯದ ಅಮೆರಿಕನ್ ಪ್ರಜೆಯೊಬ್ಬರನ್ನು ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಫಾರೂಕಿ ಅಪರಾಧಿಯೆಂದು ನ್ಯಾಯಾಲಯ ಜು.30ರಂದು ತೀರ್ಪು ನೀಡಿತ್ತು. ಆ ಮಹಿಳೆ, ಕೊಲಂಬಿಯ ವಿಶ್ವವಿದ್ಯಾನಿಲಯದ ಡಾಕ್ಟರೇಟ್‌ಗಾಗಿ ಪ್ರಬಂಧ ಸಿದ್ಧಪಡಿಸಲು ಸಂಶೋಧನೆಗಾಗಿ ಭಾರತಕ್ಕೆ ಬಂದಿದ್ದರು.
Next Story





