Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಶತಕೋಟಿ ವರ್ಷಗಳ ಹಿಂದೆ ಭಾರತವು ದಕ್ಷಿಣ...

ಶತಕೋಟಿ ವರ್ಷಗಳ ಹಿಂದೆ ಭಾರತವು ದಕ್ಷಿಣ ಧ್ರುವದ ಭಾಗವಾಗಿತ್ತು!

ಸಂಶೋಧನ ವರದಿ

ವಾರ್ತಾಭಾರತಿವಾರ್ತಾಭಾರತಿ4 Aug 2016 10:58 PM IST
share

ಕೋಲ್ಕತಾ, ಆ.4: ಶತಕೋಟಿ ವರ್ಷಗಳ ಹಿಂದೆ ಭಾರತ ಉಪಖಂಡವು ದಕ್ಷಿಣ ಧ್ರುವದ ಭಾಗವಾಗಿತ್ತೆಂಬ ಊಹೆಯನ್ನು ಬೆಂಬಲಿಸುವ ಪುರಾವೆ ಭೂಗರ್ಭ ಶಾಸ್ತ್ರಜ್ಞರಿಗೆ ಲಭಿಸಿದೆ. ಆದರೆ, ಮಾನವ ವಿಕಾಸದ ಮೊದಲು ಭೂ ಪದರಗಳ ಚಲನೆಯಿಂದಾಗಿ ಅದು ಹಲವು ಬಾರಿ ದಕ್ಷಿಣ ಧ್ರುವದಿಂದ ಬೇರ್ಪಟ್ಟು ಮರು ಜೋಡನೆಗೊಂಡಿತ್ತೆಂಬದೂ ತಿಳಿದು ಬಂದಿದೆ.

ಭೂ ಪದರದ ಸೃಷ್ಟಿಯ ಕುರಿತು ಸಂಶೋಧನೆ ನಡೆಸುತ್ತಿರುವ ಭಾರತ ಹಾಗೂ ಸ್ವಿಝರ್ಲೆಂಡ್‌ಗಳ ಭೂಗರ್ಭ ಶಾಸ್ತ್ರಜ್ಞರ ತಂಡವೊಂದು ಪೂರ್ವ ಘಟ್ಟ ಪ್ರದೇಶದಲ್ಲಿ ಉಪಖಂಡ ಪದರದ ಪುರಾತನ ಬಂಡೆಗಳ ಅಧ್ಯಯನ ನಡೆಸಿ, ಖಂಡಗಳ ರಚನೆಯ ಕುರಿತು ಪ್ರಮುಖ ಸುಳಿವುಗಳನ್ನು ಪತ್ತೆ ಹಚ್ಚಿದೆ.
ದಕ್ಷಿಣ ಧ್ರುವ ಖಂಡ ಹಾಗೂ ಭಾರತ ಉಪಖಂಡಗಳು ಹಿಂದೊಮ್ಮೆ ವಿಶಾಲವಾದ ಒಂದೇ ಖಂಡವಾಗಿತ್ತು. ಸುಮಾರು 1.5 ಶತಕೋಟಿ ವರ್ಷಗಳ ಹಿಂದೆ ಅವು ಬೇರ್ಪಟ್ಟವೆಂಬ ಊಹೆಯನ್ನು ಸಾಬೀತುಪಡಿಸಲು ತಾವು ಇದೇ ಮೊದಲ ಬಾರಿ ಶಕ್ತರಾಗಿದ್ದೇವೆಂದು ಸಂಶೋಧನೆಯ ನೇತೃತ್ವ ವಹಿಸಿದ್ದ ಐಐಟಿ-ಖರಗಪುರದ ಭೂಗರ್ಭ ಶಾಸ್ತ್ರಜ್ಞ ದೇವಾಶಿಷ್ ಉಪಾಧ್ಯಾಯ ಹೇಳಿದ್ದಾರೆ.
ಭಾರತ ಮತ್ತು ದಕ್ಷಿಣ ಧ್ರುವ ಬಳಿಕ ಸಾಗರವೊಂದರಿಂದ ಬೇರ್ಪಡಿಸಲ್ಪಟ್ಟಿದ್ದವು. ಭೂ ದ್ರವ್ಯದ ಚಲನೆಯಿಂದಾಗಿ ಈ ಸಾಗರ ಮತ್ತೆ ಮುಚ್ಚಲ್ಪಟ್ಟಿತ್ತು. ಬಳಿಕ ಈ ಎರಡು ಭೂ ಖಂಡಗಳು ಒಂದಕ್ಕೊಂದು ಅಪ್ಪಳಿಸಿ ಸುಮಾರು 1 ಶತಕೋಟಿ ವರ್ಷಗಳ ಹಿಂದೆ ಪೂರ್ವ ಘಟ್ಟಗಳ ಪರ್ವತ ಪಟ್ಟಿ ರಚನೆಯಾಗಿತ್ತೆಂದು ಅವರು ತಿಳಿಸಿದ್ದಾರೆ.
ಈ ಎರಡು ಖಂಡಗಳು ಪುನಃ ಬೇರ್ಪಟ್ಟು ಹಳೆಯ ಸಾಗರವಿದ್ದಲ್ಲಿ ಹೊಸ ಸಾಗರ ನಿರ್ಮಾಣವಾಯಿತೆಂದು ಇತ್ತೀಚೆಗೆ ‘ಎಲ್ಸೆವಿಯರ್’ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿರುವ ಅವರ ಸಂಶೋಧನೆ ವಿವರಿಸಿದೆ.
ಪುನಃ ಉಪಖಂಡಗಳ ಚಲನೆ ಹಿಮ್ಮುಖವಾಗಿ, 60 ಕೋಟಿ ವರ್ಷಗಳ ಹಿಂದೆ ಮತ್ತೊಂದು ಅಪ್ಪಳಿಸುವಿಕೆ ನಡೆಯಿತು. ಆಗ ದಕ್ಷಿಣ ಭಾರತದುದ್ದಕ್ಕೂ ಪೂರ್ವ ಘಟ್ಟಗಳು ಹಾಗೂ ಹಿಂದೊಮ್ಮೆ ಭಾರತ ಉಪಖಂಡದ ಭಾಗವೇ ಆಗಿದ್ದ ಶ್ರೀಲಂಕಾ ಮಾತ್ರವಲ್ಲದೆ ಮಡಗಾಸ್ಕರ್ ವರೆಗೆ ಚಾಚಿದವೆಂದು ಸ್ವಿಝರ್ಲೆಂಡ್‌ನ ಬರ್ನ್ ವಿಶ್ವವಿದ್ಯಾನಿಲಯದ ಭೂಗರ್ಭ ವಿಜ್ಞಾನ ವಿಭಾಗದ ಪ್ರೊ. ಕ್ಲಾಸ್ ಮೆಯ್ಗುರ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X