ಇನ್ನೂ ರಿಯೋ ತಲುಪದ ಪೇಸ್

ರಿಯೋ ಡಿ ಜನೈರೊ,ಆ.3:ಭಾರತದ ಟೆನಿಸ್ ತಾರೆಯರಾದ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಅವರ ಮುಸುಕಿನೊಳಗಿನ ಗುದ್ದಾಟ ಬೆಳಕಿಗೆ ಬಂದಿದ್ದು,ಪೇಸ್ ಇನ್ನೂ ರಿಯೋ ಡಿ ಜನೈರೊ ತಲುಪಿಲ್ಲ ಎಂದು ತಿಳಿದು ಬಂದಿದೆ.
ಟೆನಿಸ್ ತಂಡದ ಇತರ ಸದಸ್ಯರು ಈಗಾಗಲೇ ಕ್ರೀಡಾ ಗ್ರಾಮ ತಲುಪಿದ್ದಾರೆ. ಪೇಸ್ ಇನ್ನೂ ತಲುಪದಿರುವ ಹಿನ್ನೆಲೆಯಲ್ಲಿ ಅವರೊಂದಿಗೆ ಪುರುಷರ ಡಬಲ್ಸ್‌ನಲ್ಲಿ ಭಾರತದ ಪರ ಆಡಲಿರುವ ರೋಹನ್ ಬೊಪಣ್ಣ ಅನಿವಾರ್ಯವಾಗಿ ಇತರ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ.
ಇದೇ ವೇಳೆ ಪೇಸ್ ಅವರು ತಾನು ಒಲಿಂಪಿಕ್ಸ್ ಗ್ರಾಮದಲ್ಲಿ ಬೋಪಣ್ಣ ಜೊತೆ ಫ್ಲಾಟ್‌ನಲ್ಲಿರಲಾರೆ ಎಂದು ಭಾರತದ ಒಲಿಂಪಿಕ್ಸ್ ಸಂಘಟನೆಯ ಅಧಿಕಾರಿಗಳಲ್ಲಿ ಹೇಳಿದ್ದಾರೆಂದು ತಿಳಿದು ಬಂದಿದೆ.
ಪೇಸ್ ಮತ್ತು ಬೋಪಣ್ಣ ಕಳೆದ ಜುಲೈನಲ್ಲಿ ಕೊರಿಯಾ ವಿರುದ್ಧ ಡೇವಿಸ್ ಕಪ್‌ನಲ್ಲಿ ಕೊನೆಯ ಬಾರಿ ಆಡಿದ್ದರು. ಈ ಕಾರಣದಿಂದಾಗಿ ಸಮಸ್ಯೆ ಉಂಟಾಗಿದೆ. ಬೋಪಣ್ಣ ಅವರು ಸಾಕೇತ್ ಮೈನೆನಿ ಜೊತೆ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಭಾರತದ ಒಲಿಂಪಿಕ್ಸ್ ಸಂಸ್ಥೆ (ಎಐಟಿಎ) ಅವರಿಗೆ ಮಿಶ್ರ ಡಬಲ್ಸ್‌ನಲ್ಲಿ ಜೊತೆಗಾರನಾಗಿ ಬೋಪಣ್ಣ ಅವರನ್ನು ನೇಮಕ ಮಾಡಿತ್ತು.





