ಭಾರತದ 53 ಅಥ್ಲೀಟ್‌ಗಳಿಗೆ ಚೊಚ್ಚಲ ಒಲಿಂಪಿಕ್ಸ್
ರಿಯೋ ಡಿಜನೈರೊ, ಆ.4: ಬ್ರೆಝಿಲ್‌ನಲ್ಲಿ ಆ.5 ರಿಂದ ಆರಂಭವಾಗಲಿರುವ 31ನೆ ಆವೃತ್ತಿಯ ಒಲಿಂಪಿಕ್ ಗೇಮ್ಸ್‌ನಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾರತದ 86 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಈ ಪೈಕಿ 53 ಅಥ್ಲೀಟ್‌ಗಳಿಗೆ ಇದು ಚೊಚ್ಚಲ ಒಲಿಂಪಿಕ್ಸ್ ಕೂಟವಾಗಿದೆ.
ಈ ಬಾರಿಯ ಗೇಮ್ಸ್‌ನಲ್ಲಿ ಭಾರತದ 120 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ. ಇಬ್ಬರು ಅಥ್ಲೀಟ್‌ಗಳಾದ ಇಂದ್ರಜೀತ್ ಸಿಂಗ್ ಹಾಗೂ ಧರ್ಮಬೀರ್ ಸಿಂಗ್ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ ಕಾರಣ ಗೇಮ್ಸ್ ನಲ್ಲಿ ಭಾಗವಹಿಸುವುದು ಇನ್ನೂ ದೃಢಪಟ್ಟಿಲ್ಲ.
ಒಲಿಂಪಿಕ್ಸ್‌ನ ವೈಯಕ್ತಿಕ ಸ್ಪರ್ಧೆಯಲ್ಲಿ ಚೊಚ್ಚಲ ಪಂದ್ಯ ಆಡುತ್ತಿರುವ ಪೈಕಿ ಆರ್ಚರಿ-2, ಅಥ್ಲೆಟಿಕ್ಸ್-21, ಶಟ್ಲರ್-4, ಗಾಲ್ಫರ್-3, ಶೂಟರ್-8, ಕುಸ್ತಿಪಟುಗಳು-6, ಈಜುಪಟುಗಳು-2, ವೇಟ್‌ಲಿಫ್ಟರ್-1, ಜುಡೋ-1, ಪೆಡ್ಲರ್-1, ಟೆನಿಸ್-1 ಹಾಗೂ ಜಿಮ್ನಾಸ್ಟಿಕ್ ವಿಭಾಗದಲ್ಲಿ ಒಬ್ಬರಿದ್ದಾರೆ.
ಚೊಚ್ಚಲ ಗೇಮ್ಸ್ ಆಡುತ್ತಿರುವವರಲ್ಲಿ ಪ್ರಮುಖರೆಂದರೆ: ಶಟ್ಲರ್ ಪಿ.ವಿ. ಸಿಂಧು, ಶೂಟರ್‌ಗಳಾದ ರಿತು ರಾಜ್, ಮಿರಾಜ್ ಖಾನ್, ಅಪೂರ್ವಿ ಚಾಂಡೇಲಾ, ಜಿಮ್ನಾಸ್ಟ್ ದೀಪಾ ಕರ್ಮಾಕರ್, ಕುಸ್ತಿಪಟು ಸಂದೀಪ್ ಥೋಮರ್ ಹಾಗೂ ಅಥ್ಲೀಟ್‌ಗಳಾದ ಲಲಿತಾ ಬಾಬರ್ ಹಾಗೂ ಅಂಕಿತಾ ಶರ್ಮ.
ಚೊಚ್ಚಲ ಗೇಮ್ಸ್ ಆಡುತ್ತಿರುವವರು ಫೈನಲ್ ಸುತ್ತಿಗೆ ತಲುಪಿದರೆ ಇಲ್ಲವೇ ಅಗ್ರ-6ಕ್ಕೆ ಏರಿದರೆ ಭಾರತದ ಕ್ರೀಡೆ ಹೊಸ ಎತ್ತರಕ್ಕೆ ಏರಲಿದೆ.







