ಚಾಲಕನಿಗೆ ಹಲ್ಲೆ ಆರೋಪ: ಓರ್ವನ ಬಂಧನ
ಮಂಜೇಶ್ವರ, ಆ.5: ಕೇರಳ ಸಾರಿಗೆ ಬಸ್ ತಡೆದು ನಿಲ್ಲಿಸಿ ಚಾಲಕನಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮೊರತ್ತಣೆ ನಿವಾಸಿ ಬದ್ರುದ್ದೀನ್ (26) ಎಂಬಾತನನ್ನು ಕಸ್ಟಡಿಗೆ ತೆಗೆದಿದ್ದು, ಈತನ ಆಟೊರಿಕ್ಷಾ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 1ರಂದು ರಾತ್ರಿ 8:30ರ ವೇಳೆ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಸ್ಸಾರ್ಟಿಸಿ ಬಸ್‌ನ್ನು ಉದ್ಯಾವರ ಮಾಡದಲ್ಲಿ ತಡೆದು ನಿಲ್ಲಿಸಿ ಚಾಲಕನಿಗೆ ತಂಡ ಹಲ್ಲೆಗೈದಿತ್ತು. ಆಟೊರಿಕ್ಷಾದಲ್ಲಿ ಬಂದ ತಂಡ ಹಲ್ಲೆಗೈದಿದ್ದು ಈ ಬಗ್ಗೆ ಬಸ್ ಚಾಲಕ ಸುರೇಶ್ ಎಂಬವರು ನೀಡಿದ ದೂರಿನಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಈ ಸಂಬಂಧ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Next Story





