12 ವರ್ಷದ ಮಕ್ಕಳೂ ಇನ್ನು ಇಸ್ರೇಲ್ ಕಣ್ಣುಗಳಿಗೆ ಭಯೋತ್ಪಾದಕರು!

ಜೆರುಸಲೇಂ, ಆಗಸ್ಟ್ 5: ಎಳೆವಯಸ್ಸಿನ ಫೆಲೆಸ್ತೀನಿಯರು ಇಸ್ರೇಲಿ ಜನರನ್ನು ಹತ್ಯೆಗೈಯ್ಯುವ ಪ್ರಯತ್ನ ನಡೆಸುವುದು ಭಯೋತ್ಪಾದನೆಯೆಂದು ಅಂಗೀಕರಿಸುವ ಮಸೂದೆಯನ್ನು ಇಸ್ರೇಲ್ ಸೆನೆಟ್ ಪಾಸು ಮಾಡಿದೆ. "ದ ಯೂತ್ ಬಿಲ್" ಎಂದು ಹೆಸರಿಸಲಾದ ಈ ಮಸೂದೆ ಪ್ರಕಾರ ಹದಿನಾಲ್ಕು ವಯಸ್ಸಿಗಿಂತ ಕಡಿಮೆ ಪ್ರಾಯದ ಮಕ್ಕಳ ಹತ್ಯೆ ಯತ್ನ, ಕೊಲೆ ಇತ್ಯಾದಿ ನಡೆಸಿದರೆ ಭಯೋತ್ಪಾದನೆಯೆಂದು ಪರಿಗಣಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲಿ ಜನರ ವಿರುದ್ಧ ಇಂತಹ ದಾಳಿಗಳು ನಡೆಯುತ್ತಿವೆ. ಇದು ನಮ್ಮನ್ನು ಇಂತಹ ಮಸೂದೆ ತರಲು ನಮ್ಮನ್ನು ಪ್ರೇರೇಪಿಸಿತು ಎಂದು ನೆತನ್ಯಾಹುರ ತೀವ್ರ ಬಲಪಂಥೀಯ ಲಿಕುಡ್ ಪಾರ್ಟಿ ಹೇಳಿದೆ. ಫೆಲೆಸ್ತೀನಿ ಬಾಲಕರು ಕತ್ತಿ ಬೀಸಿದರೆ ಅವರನ್ನು ಯಾವುದೇ ಕಾನೂನು ಕ್ರಮಕ್ಕೆ ಗುರಿಪಡಿಸದೆ ಗುಂಡಿಟ್ಟು ಸಾಯಿಸಲು ಈ ಕಾನೂನು ಅಲ್ಲಿನ ಸೇನೆಗೆ ಅವಕಾಶ ಒದಗಿಸಿದೆ. ಆದರೆ ಈ ಮಸೂದೆಯನ್ನು ಇಸ್ರೇಲ್‌ನ ಮಾನವಹಕ್ಕು ಸಂಘಟನೆಯಾದ ’ಬೈತ್ ಸಲಾಂ’ ಟೀಕಿಸಿದೆ ಎಂದು ವರದಿ ತಿಳಿಸಿದೆ.
Next Story





