ಹಣದ ವ್ಯಾಮೋಹದಿಂದ ಶಾಂತಿ ನೆಮ್ಮದಿಯ ಕೊರತೆ
ಕಡೂರು, ಆ.5: ಆಧುನಿಕ ಯುಗದ ಜನರಲ್ಲಿ ಹಣದ ವ್ಯಾಮೋಹ ಹೆಚ್ಚಾಗಿದ್ದು, ಎಲ್ಲರೂ ಹಣದ ಹಿಂದೆಯೇ ಹೊಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮಿ ಹೇಳಿದ್ದಾರೆ.
ಅವರು ಶುಕ್ರವಾರ ತಾಲೂಕಿನ ಸರಸ್ಪತಿಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರು ಶ್ರೀದುರ್ಗಾಂಬ ದೇವಿ ದೇವಾಲಯ ಪ್ರಾರಂಭೋತ್ಸವ ಮತ್ತು ಶಿಲ್ಪಾ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಶರೋಹಣ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಇದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಮರೀಚಿಕೆಯಾಗುತ್ತಿದೆ. ಇವುಗಳನ್ನು ಮತ್ತೆ ಪಡೆಯಬೇಕೆಂದರೆ ಪ್ರತಿಯೊಬ್ಬರು ಸತ್ಯದ ದಾರಿಯಲ್ಲಿ ನಡೆದು ಸಂಸ್ಕಾರವಂತರಾಗುವಂತೆ ಕರೆ ನೀಡಿದರು.
ಇಂದಿನ ಮಕ್ಕಳು ಗುರು-ಹಿರಿಯರ ಹಾಗೂ ಹೆತ್ತವರ ಕಡೆಗಣನೆ ಮಾಡುತ್ತಿರುವುದು ಅವರಲ್ಲಿ ಸಂಸ್ಕಾರದ ಕೊರತೆಯ ಕಾರಣವಾಗಿದ್ದು, ಪೋಷಕರು ಮೊದಲು ತಮ್ಮ ಮಕ್ಕಳಿಗೆ ಸಂಸ್ಕಾರದ ಶಿಕ್ಷಣವನ್ನು ನೀಡುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಆರ್. ಶಿವಣ್ಣ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಸದಸ್ಯ ಲೋಲಾಕ್ಷಿಬಾಯಿ, ಕೆ.ಆರ್. ಮಹೇಶ್ ಒಡೆಯರ್, ಚಂದ್ರಪ್ಪ, ಎಸ್.ಎಲ್. ರುದ್ರೇಗೌಡ, ವಂಸತಮ್ಮ ತೀರ್ಥಚಾರ್, ಪುಟ್ಟೇಗೌಡ, ಸರಸ್ಪತಿಪುರ ಗ್ರಾಮಸ್ಥರು, ದಾನಿಗಳು ಉಪಸ್ಥಿತರಿದ್ದರು. ಪುಟ್ಟೇಗೌಡ ಸ್ವಾಗತಿಸಿ, ಮಂಜುನಾಥ್ ನಿರೂಪಿಸಿ, ಬಸವರಾಜು ವಂದಿಸಿದರು.







