ಪ್ರತ್ಯೇಕ ಘಟನೆ: ಇಬ್ಬರು ನಾಪತ್ತೆ
ಬ್ರಹ್ಮಾವರ, ಆ.5: ಯಡ್ತಾಡಿ ಗ್ರಾಮದ ಗೋಳಿಮರದಲ್ಲಿ ವಾಸವಾಗಿರುವ ಬಾರೀಕಿ ಪೆದ್ದ ಬಜಾರಿ ಎಂಬವರು ಜು.18ರಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ತನ್ನ ಮಗಳ ಮನೆಗೆ ಹೋದವರು ಊರಿಗೂ ಹೋಗದೆ ವಾಪಸು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಂಕರನಾರಾಯಣ: ಕುಂದಾಪುರಕ್ಕೆ ಹೋಗಿಬರುವುದಾಗಿ ಹೇಳಿ ಸಿದ್ಧಾಪುರ ಗ್ರಾಮದ ತನ್ನ ಮನೆಯಿಂದ ಜು.30ರಂದು ಹೋಗಿದ್ದ ಕೇಶವ ಪೈ ಎಂಬವರ ಪತ್ನಿ ದೀಪಾ ಪೈ (40) ಅಲ್ಲಿಗೂ ಹೋಗದೆ, ವಾಪಾಸು ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





