ಯುವತಿ ನಾಪತ್ತೆ
ಮಂಗಳೂರು, ಆ.5: ಕಾಲೇಜಿಗೆಂದು ಹೋಗಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಪತ್ತೆಯಾದವರನ್ನು ರಾಜೇಶ್ವರಿ(19) ಎಂದು ಗುರುತಿಸಲಾಗಿದೆ. ಆ. 1ರಂದು ಬೆಳಗ್ಗೆ ತನ್ನ ಮನೆಯಿಂದ ಸುರತ್ಕಲ್‌ನ ಗೋವಿಂದ ದಾಸ್ ಕಾಲೇಜಿಗೆ ಹೋದವರು ಮನೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.
ನೀಲಿ ಬಣ್ಣದ ಚೆಕ್ಸ್ ಟಾಪ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ, ಹಿಂದಿ, ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ದೂ.ಸ.: 0824- 2220540, 0824-2220526 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





