ಮರ ಬಿದ್ದು ಮನೆಗೆ ಹಾನಿ
ಉಪ್ಪಿನಂಗಡಿ, ಆ.5: ಗುರುವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಉಪ್ಪಿನಂಗಡಿ ಸಮೀಪದ ಲಕ್ಷ್ಮೀನಗರದ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕೇಶವ ಕುಮಾರ್ ಎಂಬವರ ಮನೆ ಮೇಲೆೆ ಮರ ಉರುಳಿ ಬಿದ್ದಿದ್ದು, ಮರ ಬಿದ್ದ ಪರಿಣಾಮ ಮನೆಗೆ ಹತ್ತಿರದ ಗೋಡಾನ್ ಹಾನಿಯಾಗಿದೆ. ಕಬ್ಬಿಣದ ಶೀಟ್‌ಒಡೆದಿದ್ದ್ದು, ಗೋಡೆ ಕೂಡಾ ಬಿರುಕು ಬಿಟ್ಟಿದೆ. ಮನೆ ಸಮೀಪವೆ ಇದ್ದ ತೆಂಗಿನಮರದ ಮೇಲೆ ಮರ ಬಿದ್ದಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಉಪ್ಪಿನಂಗಡಿ ಗ್ರಾಮ ಕರಣಿಕ ರಮಾನಂದ ಚಕ್ಕಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story





