ಸೋನಿಯಾಗೆ ಭುಜದ ಕೀಲಿನ ಶಸ್ತ್ರಚಿಕಿತ್ಸೆ
ಹೊಸದಿಲ್ಲಿ, ಆ.5: ವಾರಣಾಸಿ ರ್ಯಾಲಿಯ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಭುಜದ ಕೀಲು ತಪ್ಪಿದ್ದು, ಅದನ್ನು ಸರಿಪಡಿಸಲು ಬುಧವಾರ ಸಂಜೆ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಸಣ್ಣ ಶಸ್ತ್ರಚಿಕಿತ್ಸೆಯೊಂದನ್ನು ನಡೆಸಲಾಗಿದೆ. ಡಾ. ಸಂಜಯ ದೇಸಾಯಿ ಹಾಗೂ ಡಾ. ಪ್ರತೀಕ್ ಗುಪ್ತಾ ಸಹಿತ ವೈದ್ಯರ ತಂಡವೊಂದು ಈ ಶಸ್ತ್ರಕ್ರಿಯೆ ನಡೆಸಿದೆ.
ಸೋನಿಯಾರ ಎಡ ಭುಜದ ಕೀಲು ಸ್ಥಾನ ತಪ್ಪಿತ್ತು. ತಾವದನ್ನು ಸರಿಪಡಿಸಿದ್ದೇವೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಈಗವರು ಭಾರೀ ನೋವಿನಿಂದ ಮುಕ್ತರಾಗಿದ್ದಾರೆಂದು ದೇಶದಲ್ಲಿ ಭುಜ ಮತ್ತು ಮೊಣಕಾಲು ಶಸ್ತ್ರಚಿಕಿತ್ಸೆಯ ಆದ್ಯರೆಂದೇ ಪರಿಗಣಿತರಾಗಿರುವ ಡಾ. ದೇಸಾಯಿ ಟಿಒಐಗೆ ತಿಳಿಸಿದ್ದಾರೆ.
ಸೋನಿಯಾ ಒಂದೆರಡು ದಿನ ಆಸ್ಪತ್ರೆಯಲ್ಲೇ ಉಳಿಯಬೇಕಾಗಬಹುದು.
ಮಂಗಳವಾರ ವಾರಣಾಸಿಯಲ್ಲಿ ನಡೆದಿದ್ದ ರೋಡ್ ಶೋದ ವೇಳೆ ಜಾರಿಬಿದ್ದು ಅವರ ಭುಜದ ಕೀಲು ತಪ್ಪಿತ್ತು.
Next Story





