ಹುತ್ತಕ್ಕೆ ಹಾಲು ಎರೆಯದೆ ಹಸಿದ ಮಕ್ಕಳಿಗೆ ನೀಡಿ: ಮುರುಘಾ ಶರಣರು
ಮುರುಘಾ ಮಠದಲ್ಲಿ 21 ಜೋಡಿಗಳಿಗೆ ಸಾಮೂಹಿಕ ವಿವಾಹ

ಚಿತ್ರದುರ್ಗ/ಬೆಂಗಳೂರು, ಆ.5: ನಾಗರಪಂಚಮಿ ದಿನದಂದು ಹುತ್ತಕ್ಕೆ ಹಾಲು ಎರೆಯುವುದನ್ನು ಬಿಟ್ಟು, ಹಸಿದ ಮಕ್ಕಳಿಗೆ ಹಾಲನ್ನು ನೀಡಬೇಕೆಂದು ಮುರುಘಾ ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದ್ದಾರೆ.
ಶುಕ್ರವಾರ ಚಿತ್ರದುರ್ಗ ಬಸವಕೇಂದ್ರ ಮುರುಘಾಮಠ ಮತ್ತು ಎಸ್‌ಜೆಎಂ ಶಾಂತಿ-ಪ್ರಗತಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ 26ನೆ ವರ್ಷದ 8ನೆ ತಿಂಗಳ ‘ಸಾಮೂಹಿಕ ಕಲ್ಯಾಣ ಮಹೋತ್ಸವ’ ಸಮಾ ರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಗರಪಂಚಮಿ ಸಂದರ್ಭದಲ್ಲಿ ಜನರು ಹುತ್ತಕ್ಕೆ ಹಾಲನ್ನು ಎರೆಯುತಾ್ತರೆ. ಆದರೆ, ಹಾವು ಹಾಲನ್ನು ಕುಡಿ ಯುವುದಿಲ್ಲ. ಹಾವಿನ ಆಹಾರ ಇಲಿ, ಹೆಗ್ಗಣ, ಕಪ್ಪೆ ಮೊದಲಾದವು ಎಂದ ಅವರು, ಹಾಲನ್ನು ಕುಡಿಯು ವವರು ಮಕ್ಕಳು, ಹೀಗಾಗಿ ಹಸಿದ ಮಕ್ಕಳಿಗೆ ಹಾಲನ್ನು ನೀಡಿ ಹುತ್ತಕ್ಕೆ ಹಾಕಬೇಡಿ. ಅದೂ ಅಲ್ಲದೆ, ನಮ್ಮ ಜನರು ಕಲ್ಲನಾಗರ ಕಂಡರೆ ಸಾಕು ಹಾಲನೆರೆ ಎಂಬರು, ನಿಜದ ನಾಗರ ಕಂಡರೆ ಬಡಿಯಿರಿ ಎನ್ನು ತ್ತಾರೆ ಎಂದು ಶರಣರು ಹೇಳಿದರು.
ಕುಪ್ಪೂರು ಗದ್ದಿಗೆ ಸಂಸ್ಥಾನಮಠದ ಡಾ.ಯತೀಶ್ವರ ಶಿವಾಚಾರ್ಯ ಮಾನಾಡಿ, ಚಿತ್ರದುರ್ಗ ಮಠ ಎಂದರೆ ಸಾಂಸ್ಕೃತಿಕ ಕೇಂದ್ರ ಎಂಬುದು ರಾಜ್ಯದಾದ್ಯಂತ ಹೆಸರು ಮಾಡಿದ್ದು, ಬಸವಣ್ಣವರ ವಿಚಾರಧಾರೆಗಳನ್ನು ಗ್ರಾಮದಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದವರೆಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ 21 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರ್ಯಕ್ರಮದಲ್ಲಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು, ಬಿಸ್ಲೇರಿ ಗಂಗಣ್ಣ, ವೇದಮೂರ್ತಿ, ಪೈಲ್ವಾನ್ ತಿಪ್ಪೇಸಾ್ವಮಿ, ಎನ್.ತಿಪ್ಪಣ್ಣ, ಎ.ಜೆ.ಪರಮಶಿವಯ್ಯ ಸೇರಿ ಪ್ರಮುಖರು ಉಪಸ್ಥಿತರಿದ್ದರು.





