ಫ್ರಾನ್ಸ್ ನ ಬಾರ್ ನಲ್ಲಿ ಸ್ಫೋಟ: 13 ಸಾವು

ರೋಹಿನ್(ಫ್ರಾನ್ಸ್), ಆ.6: ಇಲ್ಲಿನ ರೋಹಿನ್ ನಗರದ ಬಾರೊಂದರಲ್ಲಿ ಹುಟ್ಟುಹಬ್ಬದ ಆಚರಣೆಯ ವೇಳೆ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ಸ್ಧಳದಲ್ಲೇ 13 ಮಂದಿ ಮೃತಪಟ್ಟಿದ್ದಾರೆ.ಹಲವರಿಗೆ ಗಂಭೀರ ಗಾಯಗಳಾಗಿವೆ.
ಆಕಸ್ಮಿಕ ಸ್ಫೋಟ ಸಂಭವಿಸಿ ನಂತರ ಬಾರ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಾರಲ್ಲಿ ಸಿಕ್ಕಿಕೊಂಡಿದ್ದ 6 ಮಂದಿಯನ್ನು ರಕ್ಷಿಸಲಾಗಿದೆ.
ಯುವಕರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ಈ ಸ್ಫೋಟ ಸಂಭವಿಸಿದ್ದು, ಮೃತರೆಲ್ಲರು 18 ರಿಂದ 25 ವರ್ಷದೊಳಗಿನ ಯುವಕರು ಎಂದು ತಿಳಿದು ಬಂದಿದೆ.
Next Story





