ಝಹ್ರಾ ನೆಮಾತಿ ಧ್ವಜ ಹಿಡಿದ ಇರಾನ್‌ನ ಮೊದಲ ಮಹಿಳಾ ಅಥ್ಲೀಟ್
.jpg)
ರಿಯೋ ಡಿ ಜನೈರೊ, ಆ.6; ಸಾಂಬಾ ನಾಡಿನಲ್ಲಿ ಇಂದು ಆರಂಭಗೊಂಡ ಒಲಿಂಪಿಕ್ಸ್‌ನಲ್ಲಿ ಇರಾನ್‌ನ ಬಿಲ್ಲುಗಾರ್ತಿ ಝಹ್ರಾ ನೆಮಾತಿ ಅವರು ಇರಾನ್‌ನ ಧ್ವಜ ಹಿಡಿದು ಪಥ ಸಂಚಲನದಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಇತಿಹಾಸ ಬರೆದಿದ್ದಾರೆ.
ಝಹ್ರಾ ಅವರು ಮರ್ಕಾನಾ ಸ್ಟೇಡಿಯಂನಲ್ಲಿ ವೀಲ್ ಚೇರ್‌ನಲ್ಲಿ ಪಥ ಸಂಚಲನದಲ್ಲಿ ಭಾಗವಹಿಸಿ ಹೊಸ ಇತಿಹಾಸ ಬರೆದರು.
ಇಸ್ಲಾಮಿಕ್ ಕಾನೂನನ್ನು ಕಟ್ಟು ನಿಟ್ಟಾಗಿ ಆಚರಿಸುವ ಇರಾನ್‌ನಲ್ಲಿ ಈ ಮೊದಲು ಮಹಿಳಾ ಅಥ್ಲೀಟ್‌ಗಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಇರಲಿಲ್ಲ. ಪುರುಷರಿಗೆ ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಇತ್ತು. 2012ರಲ್ಲಿ ಲಂಡನ್ ಒಲಿಂಪಿಕ್ಸ್ ಬಳಿಕ ಸಂಭವಿಸಿದ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಝಹ್ರಾ ಅವರು ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದರು.ಇದು ಅವರ ದಾಖಲೆಯಾಗಿತ್ತು. 31ರ ಹರೆಯದ ಬಿಲ್ಲು ಗಾರ್ತಿ ಝಹ್ರಾ ಅವರು ಇದೀಗ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನ ಆರ್ಚರಿಯಲ್ಲಿ ಸ್ಥಾನ ಪಡೆದಿದ್ದಾರೆ.
Next Story





