ಕಾಸರಗೋಡು: ಡಿವೈಎಫ್‌ಐ ಕಾಲ್ನಡಿಗೆ ಜಾಥಾಕ್ಕೆ ಚಾಲನೆ
.jpg)
ಕಾಸರಗೋಡು, ಆ.6: ಕೋಮುವಾದಕ್ಕೆ ವಿದಾಯ, ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಸಂಘಟಿತರಾಗೋಣ ಎಂಬ ಘೋಷಣೆ ಯೊಂದಿಗೆ ಆಗಸ್ಟ್ 15 ರಂದು ಕಾಸರಗೋಡಿನಲ್ಲಿ ನಡೆಯುವ ಡಿವೈಎಫ್ಐ ಯುವ ಸಂಗಮ ಕಾರ್ಯಕ್ರಮದ ಯಶಸ್ಸಿಗಾಗಿ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದ್ದು, ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಸಮಿತಿ ವತಿಯಿಂದ ಕಾಲ್ನಡಿಗೆ ಜಾಥಾ ನಡೆಯಿತು.
ಜಾಥಾವನ್ನು ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವಿ.ಪಿ.ಪಿ. ಮುಸ್ತಫಾ ಅವರು ನಾಯಕ ಸಜಿತ್ರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಉಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದ್ದರು.
ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಅಬ್ದುರ್ರಝಾಕ್ ಚಿಪ್ಪಾರ್ , ಫಾರೂಕ್ ಶಿರಿಯಾ, ರಮಣನ್ ಮಾಸ್ಟರ್ , ಸಿದ್ದಿಕ್ ಅವಳ, ಪುರುಷೋತ್ತಮ ಬಳ್ಳೂರು, ಸಾದಿಕ್ ಚೆರುಗೋಳಿ, ಕೆ. ಶಬೀಷ್ ಉಪಸ್ಥಿತರಿದ್ದರು.
Next Story





