ತತ್ವ, ಸಿದ್ಧಾಂತ, ಶ್ರದ್ಧೆಯಿಂದ ಯಶಸ್ಸು ಗಳಿಸಲು ಸಾಧ್ಯ: ಪ್ರೊ. ಡಾ. ರಂಗನಾಥ್‌ರಾವ್
ಕುಶಾಲನಗರ, ಆ.6: ಯಾವುದೇ ಕೆಲಸ ಮಾಡುವಾಗ ತತ್ವ, ಸಿದ್ಧಾಂತ ಮತ್ತು ಶ್ರದ್ಧೆಯನ್ನಿಟ್ಟುಕೊಂಡಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯವೆಂದು ಮಹಾರಾಣಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಡಾ. ರಂಗನಾಥ್‌ರಾವ್ ಹೇಳಿದ್ದಾರೆ.
ಕುಶಾಲನಗರದ ತಾವರೆಕೆರೆಯ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶ ಭ್ರಷ್ಟಾಚಾರ ಮುಕ್ತವಾಗಬೇಕಾದರೆ, ಭವ್ಯ ಭಾರತವನ್ನು ಕಟ್ಟಬೇಕಾದರೆ ಭಾರತ ರತ್ನ ಡಾ. ಅಬ್ದುಲ್ ಕಲಾಂ ಹೇಳಿರುವಂತೆ ತಾಯಿ-ತಂದೆ-ಶಿಕ್ಷಕನ ಉತ್ತಮ ಮಾರ್ಗದರ್ಶನದಿಂದ ಸಾಧ್ಯವೆಂಬ ಮಾತನ್ನು ನೆನಪಿಸಿದರು.
ಮಹಾಜನ ವಿಜ್ಞಾನ ಕಾಲೇಜಿನ ಉಪನ್ಯಾಸಕರು ಹಾಗೂ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಎಂ.ಜೆ ಪ್ರಭುದೇವ್ ಮಾತನಾಡಿ, ‘ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದಿದೆಯಲ್ಲ ಅದೇ ನಿಜವಾದ ಕನಸು’ ಆದ್ದರಿಂದ ನೀವೂ ಏನಾದರು ಸಾಧನೆ ಮಾಡಬೇಕಾದರೆ ಹಿಡಿದ ಛಲವನ್ನು ಬಿಡಬೇಡಿ. ಪ್ರಥಮ ಹಂತಗಳಲ್ಲಿ ಸೋಲಿನ ಅನುಭವ ಸಹಜ ಆದರೆ ಆತ್ಮಸ್ಥೆರ್ಯ ಕಳೆದುಕೊಳ್ಳಬೇಡಿ ಎಂದು ತಿಳಿಹೇಳಿದರು
ಕಾಲೇಜಿನ ಅಧ್ಯಕ್ಷ ಎಂ.ಎನ್ ಶಂಭುಲಿಂಗಪ್ಪಮಾತನಾಡಿ, ಒಬ್ಬರನ್ನು ಸೋಲಿಸುವುದು ಬಹಳ ಸುಲಭ, ಆದರೆ ಒಬ್ಬರನ್ನು ಗೆಲ್ಲುವುದು ಬಹಳ ಕಷ್ಟ ಅಲ್ಲದೆ ವಿದ್ಯಾರ್ಥಿ ಜೀವನದಿಂದಲೇ ಸಹಬಾಳ್ವೆೆ, ಸಹಭಾಗಿತ್ವ ಮತ್ತು ಸೋದರತೆ ಭಾವನೆಗಳಿದ್ದರೆ ಎಲ್ಲರ ಮನಸ್ಸನ್ನು ಗೆಲ್ಲಬಹುದು. ಆದ್ದರಿಂದ ಹೊಂದಾಣಿಕೆಯೊಂದಿಗೆ ಮುನ್ನಡೆ ಸಾಧಿಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತೇಜಸ್ವಿ ಮತ್ತು ನಿಸರ್ಗ ಪ್ರಾರ್ಥಿಸಿ, ಅಶಿಕಾ ಗಣ್ಯರ ಪರಿಚಯ ಮಾಡಿಕೊಟ್ಟರು.
ವೇದಿಕೆಯಲ್ಲಿ ಕುಶಾಲನಗರದ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಆರ್.ಎಸ್ ಕಾಶೀಪತಿ, ಕಮಲಮ್ಮ ಕಾಶೀಪತಿ, ಕಾಲೇಜಿನ ಪ್ರಾಂಶುಪಾಲ ರವೀಂದ್ರ ಬಾಬು, ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಟಿ.ವೈ ಪಂಡರೀನಾಥ್ ನಾಯ್ಡು, ಗಿರೀಶ್, ಸಚಿತ್ ಉಪಸ್ಥಿತರಿದ್ದರು







