ದೌರ್ಜನ್ಯಕ್ಕೆ ಬೇಸತ್ತು ತಂದೆಯನ್ನೇ ಗುಂಡಿಕ್ಕಿ ಕೊಂದ 14ರ ಬಾಲಕಿ

ಕ್ಲೀವ್‌ಲ್ಯಾಂಡ್, ಆ. 6: ಕುಟುಂಬ ಸದಸ್ಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಆತನ 14 ವರ್ಷದ ಮಗಳೇ ಆತ ಮಲಗಿದ್ದಾಗ ತಲೆಗೆ ಗುಂಡು ಹಾರಿಸಿ ಕೊಂದ ಘಟನೆ ಅಮೆರಿಕದ ಓಹಿಯೊ ರಾಜ್ಯದಲ್ಲಿ ನಡೆದಿದೆ.
ಕ್ಲೀವ್‌ಲ್ಯಾಂಡ್‌ನಿಂದ ಸುಮಾರು 55 ಮೈಲಿ ದೂರದಲ್ಲಿರುವ ವಾರನ್‌ನಲ್ಲಿರುವ ಕುಟುಂಬದ ಮನೆಯಲ್ಲಿ ಜುಲೈ 28ರಂದು ಮುಂಜಾನೆ ಘಟನೆ ಸಂಭವಿಸಿದೆ.
ಬಾಲಕಿಯನ್ನು ಈಗ ಬಾಲಾಪರಾಧಿಗಳ ಪುನರ್ವಸತಿ ಶಿಬಿರದಲ್ಲಿ ಇಡಲಾಗಿದೆ. ತನ್ಮ ಮೇಲಿರುವು ಹತ್ಯೆ ಆರೋಪವನ್ನು ಬಾಲಕಿ ಬುಧವಾರ ನಿರಾಕರಿಸಿದ್ದಾಳೆ.
ಬಾಲಕಿಯ ತಂದೆಯು ತನ್ನ ಹೆಂಡತಿಯ ಮೇಲೆ ದಿನ ನಿತ್ಯ ದೌರ್ಜನ್ಯ ನಡೆಸುತ್ತಿದ್ದ ಎನ್ನಲಾಗಿದೆ. ಇದನ್ನು ಪ್ರತಿದಿನ ಬಾಲಕಿ ಮತ್ತು ಆಕೆಯ ಸಹೋದರ-ಸಹೋದರಿಯರು ನೋಡುತ್ತಿದ್ದರು. ಒಂದು ಹಂತದಲ್ಲಿ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬಾಲಕಿ ಈ ಹತಾಶ ಕ್ರಮಕ್ಕೆ ಮುಂದಾದಳು ಎಂದು ಕ್ಲೀವ್‌ಲ್ಯಾಂಡ್ ಅಟಾರ್ನಿ ಇಯಾನ್ ಫ್ರೈಡ್‌ಮ್ಯಾನ್ ಹೇಳಿದರು.
ತನ್ನ ಮಗಳನ್ನು ‘ಹೀರೊ’ ಎಂಬುದಾಗಿ ಆಕೆಯ ತಾಯಿ ಬಣ್ಣಿಸಿದ್ದಾರೆ.
Next Story





